ಕರ್ನಾಟಕ

karnataka

ETV Bharat / bharat

‘ಭಾರತ ನಮ್ಮ ಬೆಸ್ಟ್ ಫ್ರೆಂಡ್’: ಉಭಯ ರಾಷ್ಟ್ರಗಳ ಸ್ನೇಹ ಸಂಬಂಧ ಬಣ್ಣಿಸಿದ ಮಡಗಾಸ್ಕರ್ ಸಚಿವ - ಮಡಗಾಸ್ಕರ್‌ ರಕ್ಷಣಾ ಸಚಿವ ರಿಚರ್ಡ್

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ಈ ಸಂವಾದದಲ್ಲಿ, ಉದಯೋನ್ಮುಖ ಆರ್ಥಿಕತೆಗಳ ರಕ್ಷಣಾ ಸಾಮರ್ಥ್ಯಗಳನ್ನು ಪರಿವರ್ತಿಸಲು ಭಾರತವು ಸಹಾಯ ಮಾಡುತ್ತದೆ ಎಂದು ಮಡಗಾಸ್ಕರ್‌ ರಕ್ಷಣಾ ಸಚಿವ ರಿಚರ್ಡ್ ಒತ್ತಿಹೇಳಿದ್ದಾರೆ. ಈ ಮಧ್ಯೆ ಜೂನ್ 26 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಡಗಾಸ್ಕರ್ ಭಾರತೀಯ ರಕ್ಷಣಾ ಸಚಿವರನ್ನು ಆಹ್ವಾನಿಸಿರುವುದಾಗಿ ಅವರು ತಿಳಿಸಿದ್ದಾರೆ.

Madagascar Defense Minister
Madagascar Defense Minister

By

Published : Feb 9, 2020, 5:47 PM IST

ಇತ್ತೀಚೆಗೆ ಡಯೇನ್ ಚಂಡಮಾರುತದಿಂದ ಉಂಟಾದ ವಿನಾಶದ ಹಿನ್ನೆಲೆಯಲ್ಲಿ ಸಣ್ಣ ದ್ವೀಪ ರಾಷ್ಟ್ರ ಮಡಗಾಸ್ಕರ್‌ಗೆ ಸಮಯೋಚಿತ ಮತ್ತು ಗಣನೀಯ ನೆರವು ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳು ಎಂದು ಆ ದೇಶದ ರಕ್ಷಣಾ ಸಚಿವ ಲೆಫ್ಟಿನೆಂಟ್ ಜನರಲ್ ರೊಕೊಟೊನಿರಿನಾ ರಿಚರ್ಡ್ ಹೇಳಿದ್ದಾರೆ. ಲಖನೌದಲ್ಲಿ ಡಿಫೆನ್ಸ್‌ಎಕ್ಸ್​ಪೋ- 2020ರಲ್ಲಿ ಭಾಗಿಯಾಗಿ, ಜೊತೆಗೆ ಸಹವರ್ತಿ ರಾಜನಾಥ್ ಸಿಂಗ್ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಲೆಫ್ಟಿನೆಂಟ್ ಜೆನ್ ರಿಚರ್ಡ್, ಈಟಿವಿ ಭಾರತ್ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ಭಾರತವನ್ನು ಉತ್ತಮ ಸ್ನೇಹಿತ ರಾಷ್ಟ್ರ ಎಂದು ಶ್ಲಾಘಿಸಿದ್ದಾರೆ.

ಕಳೆದ ಕೆಲವು ವಾರಗಳ ಹಿಂದೆ ಸಂಭವಿಸಿದ ಚಂಡಮಾರುತದಿಂದ ಸಂಕಷ್ಟಕ್ಕೊಳಗಾಗಿದ್ದ ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಕ್ಕೆ ಭಾರತೀಯ ನೌಕಾಪಡೆ ತನ್ನ ‘ಆಪರೇಷನ್ ವೆನಿಲ್ಲಾ’ ಮೂಲಕ ನೆರವು ನೀಡಿತ್ತು. ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದವರ ಪರಿಹಾರ ಕಾರ್ಯಾಚರಣೆಗಳಲ್ಲಿ ಬೆಂಬಲ ನೀಡಲು ಐಎನ್‌ಎಸ್ ಐರಾವತ್ ಅನ್ನು ಶೀಘ್ರವಾಗಿ ಅಲ್ಲಿಗೆ ಕಳುಹಿಸಲಾಯಿತು ಮತ್ತು ಸ್ಥಳೀಯರಿಗೆ ವೈದ್ಯಕೀಯ ಶಿಬಿರಗಳನ್ನು ಸಹ ಭಾರತೀಯ ನೌಕಾಪಡೆ ವತಿಯಿಂದ ಸ್ಥಾಪಿಸಲಾಯಿತು.

ಕಳೆದ ವಾರ ಲಖನೌದಲ್ಲಿ ನಡೆದ ಡಿಫೆನ್ಸ್‌ ಎಕ್ಸ್​ಪೋ- 2020 ರ ಎರಡನೇ ದಿನದಂದು ರಾಜನಾಥ್ ಸಿಂಗ್ ಮತ್ತು ಲೆಫ್ಟಿನೆಂಟ್ ಜನರಲ್ ರಿಚರ್ಡ್ ನಡುವಿನ ಚರ್ಚೆಯಲ್ಲಿ ಈ ಪ್ರದೇಶದಲ್ಲಿ ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸುವ ಕುರಿತು ಪ್ರಮುಖ ಚರ್ಚೆ ನಡೆಯಿತು. ಕಡಲ ನೆರೆಹೊರೆಯವರಾಗಿ ‘ವ್ಯಾಪಾರ ಮತ್ತು ವಾಣಿಜ್ಯವು ಅಭಿವೃದ್ಧಿ ಹೊಂದುವಂತೆ ಸುರಕ್ಷಿತ ಕಡಲ ವಾತಾವರಣವನ್ನು ಖಾತರಿಪಡಿಸುವ ಜವಾಬ್ದಾರಿ ಎರಡೂ ದೇಶಗಳ ಮೇಲಿದೆ’ ಎಂದು ರಾಜನಾಥ್‌ ಸಿಂಗ್ ಚರ್ಚೆ ವೇಳೆ ಒತ್ತಿಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಲೆಫ್ಟಿನೆಂಟ್ ಜನರಲ್ ರಿಚರ್ಡ್ ಅವರು ‘ಹಿಂದೂ ಮಹಾಸಾಗರ ಕಡಲ ಪ್ರದೇಶದಲ್ಲಿ ಭದ್ರತೆ ನೀಡುವಲ್ಲಿ ಭಾರತಕ್ಕೆ ದೊಡ್ಡ ಪಾತ್ರವಿದೆ’ ಎಂದು ತಿಳಿಸಿದ್ದರು.

ಭಾರತವು ಮಾನವೀಯ ನೆರವು ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿ ಮಡಗಾಸ್ಕರ್ ಅಧ್ಯಕ್ಷ ರಾಜೋಲಿನಾ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಹಿಂದೂ ಮಹಾಸಾಗರದಿಂದ ಮಡಗಾಸ್ಕರ್‌ಗೆ ಸಂಪರ್ಕ ಹೊಂದಿದ್ದು, ಇಂಥ ನೆರವಿನ ಮೂಲಕ ಗಟ್ಟಿಯಾಗಿ ಮಡಗಾಸ್ಕರ್‌ನೊಂದಿಗೆ ನಿಲ್ಲಲು ಭಾರತ ಬದ್ಧವಾಗಿದೆ. ಪ್ರದೇಶದ ಎಲ್ಲರ ಭದ್ರತೆ ಮತ್ತು ಬೆಳವಣಿಗೆಗಾಗಿ (‘ಸಾಗರ್’, ಹಿಂದಿಯಲ್ಲಿ ಅಂದರೆ ಸಾಗರ ಎಂದರ್ಥ) ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದರು.

ಜಿಬೌಟಿಯಲ್ಲಿನ ಮಿಲಿಟರಿ ನೆಲೆಯ ಮೂಲಕ ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಹೆಜ್ಜೆ ಗುರುತನ್ನು ಹೊಂದಿರುವಾಗ, ಭಾರತವು ತನ್ನ ಆಫ್ರಿಕದ ಪಾಲುದಾರರೊಂದಿಗೆ ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸಿದೆ. ಈ ಕಾರ್ಯತಂತ್ರದ ಭಾಗವಾಗಿ 2020ರ ಫೆಬ್ರವರಿ 6ರಂದು ಲಕ್ನೋದಲ್ಲಿ ನಡೆದ ದ್ವೈವಾರ್ಷಿಕ ರಕ್ಷಣಾ ಪ್ರದರ್ಶನ ಡಿಫೆನ್ಸ್‌ ಎಕ್ಸ್‌ಪೋ ಇಂಡಿಯಾ 2020 ರ 11ನೇ ಆವೃತ್ತಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಭಾರತವು ಆಫ್ರಿಕಾದ ರಕ್ಷಣಾ ಮಂತ್ರಿಗಳೊಂದಿಗೆ ಸಮಾವೇಶ ನಡೆಸಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತವು ನೈಜೀರಿಯಾ, ಇಥಿಯೋಪಿಯಾ ಮತ್ತು ತಾಂಜಾನಿಯಾದಲ್ಲಿ ರಕ್ಷಣಾ ಅಕಾಡೆಮಿಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದೆ; ಬೋಟ್ಸ್ವಾನ, ನಮೀಬಿಯಾ, ಉಗಾಂಡಾ, ಲೆಸೊಥೊ, ಜಾಂಬಿಯಾ, ಮಾರಿಷಸ್, ಸೀಶೆಲ್ಸ್, ತಾಂಜಾನಿಯಾ ಸೇರಿದಂತೆ ಹಲವಾರು ಆಫ್ರಿಕನ್ ದೇಶಗಳಲ್ಲಿ ತರಬೇತಿ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಸ್ನೇಹಪರ ಹಡಗು ಭೇಟಿ ಮತ್ತು ರಕ್ಷಣಾ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸಿದೆ. ಇವೆಲ್ಲವೂ ಆಫ್ರಿಕದಲ್ಲಿ ಭಾರತದ ಹೆಜ್ಜೆ ಗುರುತಿನ ಕುರಿತು ತಿಳಿಸುತ್ತವೆ.

“2019 ರಲ್ಲಿ ಮೊಜಾಂಬಿಕ್‌ನಲ್ಲಿ ನಡೆದ ಇಡೈ ಚಂಡಮಾರುತದ ಸಂದರ್ಭದಲ್ಲಿ ಮತ್ತು 2018 ರಲ್ಲಿ ಜಿಬೌಟಿ ದುರಂತದಲ್ಲಿ ಸಿಲುಕಿದ್ದ ದೇಶದ 41 ವ್ಯಕ್ತಿಗಳನ್ನು ಸ್ಥಳಾಂತರಿಸುವುದರೊಂದಿಗೆ ಮತ್ತು ಮಡಗಾಸ್ಕರ್ ಸೇರಿದಂತೆ ಹಲವಾರು ಇತರ ಕಾರ್ಯಾಚರಣೆಗಳಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾರತೀಯ ರಕ್ಷಣಾ ಪಡೆಗಳ ಕೊಡುಗೆಯನ್ನು ನಾವು ಸದಾ ಸ್ಮರಿಸುತ್ತೇವೆ ”ಎಂದು ರಕ್ಷಣಾ ಮಂತ್ರಿಗಳ ಸಭೆಯ ನಂತರ ಹೊರಡಿಸಿದ ಜಂಟಿ ಹೇಳಿಕೆ ತಿಳಿಸಿದೆ.

ಭಯೋತ್ಪಾದನೆ ಮತ್ತು ಉಗ್ರವಾದದ ಸಾಮಾನ್ಯ ಭದ್ರತಾ ಸವಾಲುಗಳನ್ನು ಗುರುತಿಸಿ, ಕಡಲ್ಗಳ್ಳತನ, ಮಾನವ ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಸಂಘಟಿತ ಅಪರಾಧಗಳನ್ನು ಗುರುತಿಸಿ ನಿಯಂತ್ರಿಸುವುದು ಸೇರಿದಂತೆ ಭದ್ರತಾ ಸಂಬಂಧಿ ಹಲವು ಮಹತ್ತರ ವಿಚಾರಗಳ ಚರ್ಚೆಯೊಂದಿಗೆ ರಕ್ಷಣಾ ಸಚಿವರ ಸಮಾವೇಶವು ರಕ್ಷಣಾ ವಲಯದಲ್ಲಿನ ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದೆ. "ಹೂಡಿಕೆ, ರಕ್ಷಣಾ ಸಲಕರಣೆಗಳ ಸಾಫ್ಟ್‌ವೇರ್, ಡಿಜಿಟಲ್ ಡಿಫೆನ್ಸ್, ಸಂಶೋಧನೆ ಮತ್ತು ಅಭಿವೃದ್ಧಿ, ರಕ್ಷಣಾ ಸಾಧನಗಳನ್ನು ಒದಗಿಸುವುದು, ಬಿಡಿಭಾಗಗಳು ಮತ್ತು ಸುಸ್ಥಿರ ಮತ್ತು ಪರಸ್ಪರ ಲಾಭದಾಯಕ ಷರತ್ತುಗಳ ನಿರ್ವಹಣೆ ಸೇರಿದಂತೆ ರಕ್ಷಣಾ ಉದ್ಯಮದ ಕ್ಷೇತ್ರದಲ್ಲಿ ಆಳವಾದ ಸಹಕಾರಕ್ಕಾಗಿ ನಾವು ಕರೆ ನೀಡುತ್ತೇವೆ" ಎಂದು ಸಮಾವೇಶದ ಔಪಚಾರಿಕ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ಈ ಸಂವಾದದಲ್ಲಿ, ಉದಯೋನ್ಮುಖ ಆರ್ಥಿಕತೆಗಳ ರಕ್ಷಣಾ ಸಾಮರ್ಥ್ಯಗಳನ್ನು ಪರಿವರ್ತಿಸಲು ಭಾರತವು ಸಹಾಯ ಮಾಡುತ್ತದೆ ಎಂದು ರಕ್ಷಣಾ ಸಚಿವ ರಿಚರ್ಡ್ ಒತ್ತಿಹೇಳಿದ್ದಾರೆ. ಈ ಮಧ್ಯೆ ಜೂನ್ 26 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಡಗಾಸ್ಕರ್ ಭಾರತೀಯ ರಕ್ಷಣಾ ಸಚಿವರನ್ನು ಆಹ್ವಾನಿಸಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಶ್ನೆ1: ಮಡಗಾಸ್ಕರ್‌ನಲ್ಲಿ ಇತ್ತೀಚಿನ ಚಂಡಮಾರುತಗಳು ಎಷ್ಟು ವಿನಾಶವನ್ನು ಉಂಟುಮಾಡಿದೆ ಎಂಬುದರ ಕುರಿತು ನಮಗೆ ವಿವರಿಸಿ?

ಲೆಫ್ಟಿನೆಂಟ್ ಜೆನರಲ್‌ ರಿಚರ್ಡ್-ಹಿಂದಿನ ಸತತ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜೀವ ಮತ್ತು ವಸ್ತುಗಳಿಗೆ ಭಾರೀ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅಧಿಕೃತವಾಗಿ, ಮಡಗಾಸ್ಕರ್​ನಲ್ಲಿ ಇಪ್ಪತ್ತೊಂದು ಮಂದಿ ಸತ್ತಿದ್ದಾರೆ, ಇಪ್ಪತ್ತು ಮಂದಿ ಕಾಣೆಯಾಗಿದ್ದಾರೆ ಮತ್ತು ಸುಮಾರು 80,000 ಜನರು ನಿರಾಶ್ರಿತರಾಗಿದ್ದಾರೆ.

ಪ್ರಶ್ನೆ 2: ಮೊದಲ ಪ್ರತಿಸ್ಪಂದನದಲ್ಲಿ ಭಾರತೀಯ ನೆರವು ಎಷ್ಟು ಮಹತ್ವದ್ದಾಗಿದೆ? ನವದೆಹಲಿಯಿಂದ ನಿಮ್ಮ ಮುಂದಿನ ನಿರೀಕ್ಷೆಗಳೇನು?

ಲೆಫ್ಟಿನೆಂಟ್ ಜೆನರಲ್‌ ರಿಚರ್ಡ್-ಭಾರತ ಸರ್ಕಾರದಿಂದ ನೆರವು ನಿಜವಾಗಿಯೂ ಗಣನೀಯವಾಗಿದೆ. ಏಕೆಂದರೆ ಸುಮಾರು 5 ಟನ್ ಆಹಾರ ಮತ್ತು ಔಷಧಿಗಳನ್ನು ಭಾರತದಿಂದ ಒದಗಿಸಿದ್ದಾರೆ. ಜೊತೆಗೆ ವೈದ್ಯಕೀಯ ಶಿಬಿರಗಳ ಮೂಲಕ ಜನ ಆರೋಗ್ಯ ರಕ್ಷಣೆಯನ್ನೂ ಸಹ ಮಾಡಲಾಗಿದೆ. ಅಲ್ಲದೆ, ಈ ಕಷ್ಟದ ಸಮಯದಲ್ಲಿ ಅಲ್ಪಾವಧಿಯಲ್ಲಿ ಮಲಗಾಸಿ ಜನರ ರಕ್ಷಣೆಗಾಗಿ ಬಂದಿದ್ದಕ್ಕಾಗಿ ಮಡಗಾಸ್ಕರ್ ಭಾರತವನ್ನು ಉತ್ತಮ ಸ್ನೇಹಿತ ಎಂದು ಭಾವಿಸುತ್ತದೆ. ಗಣರಾಜ್ಯದ ಅಧ್ಯಕ್ಷರು ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂಲಕ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಶ್ನೆ 3. ಹಿಂದೂ ಮಹಾಸಾಗರದಲ್ಲಿ ನಿವ್ವಳ ಭದ್ರತಾ ಪೂರೈಕೆದಾರರಾಗಲು ಭಾರತಕ್ಕೆ ಸಾಕಷ್ಟು ಸಾಮರ್ಥ್ಯವಿದೆಯೇ?

ಲೆಫ್ಟಿನೆಂಟ್ ಜೆನರಲ್‌ ರಿಚರ್ಡ್ -ಭಾರತ ತನ್ನ ಕೌಶಲ್ಯ ಮತ್ತು ವಿಶ್ವಾದ್ಯಂತ ಖ್ಯಾತಿಯಿಂದ ಗುರುತಿಸಲ್ಪಟ್ಟ ದೊಡ್ಡ ದೇಶ. ವಿಶ್ವದ ಇತರ ದೇಶಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಡಿಫೆನ್ಸ್‌ ಎಕ್ಸ್‌ಪೊ ಮೂಲಕ ದೇಶವು ಪ್ರದರ್ಶಿಸುತ್ತದೆ. ಅಲ್ಲದೆ, ಆಫ್ರಿಕದ ದೇಶಗಳ ರಕ್ಷಣಾ ಮಂತ್ರಿಗಳ ಜೊತೆ ಭಾರತೀಯ ರಕ್ಷಣಾ ಸಚಿವರ ಸಮಾವೇಶವು ಆಫ್ರಿಕದ ದೇಶಗಳಲ್ಲಿ ಭಾರತೀಯ ಕಂಪ್ಯೂಟರ್ ಕೈಗಾರಿಕೆಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸಿದೆ. ಹೆಚ್ಚು, ಪ್ರಗತಿ ಮತ್ತು ತಾಂತ್ರಿಕ ಪರಾಕ್ರಮವು ಭಾರತದೊಂದಿಗಿನ ಸಹಕಾರವನ್ನು ಬಲಪಡಿಸುವ ಬಯಕೆಯನ್ನು ಪ್ರಾರಂಭಿಸಿದೆ.

ಪ್ರಶ್ನೆ 4: ಲಕ್ನೋದಲ್ಲಿ ಡಿಫೆನ್ಸ್ ಎಕ್ಸ್‌ಪೋದಿಂದ ನೀವು ಏನನ್ನು ತೆಗೆದುಕೊಂಡು ಹೋಗಲು ಆಶಿಸುತ್ತೀರಿ? ಇಲ್ಲಿ ನಿಮಗಾದ ಅನುಭವ ಏನು?

ಲೆಫ್ಟಿನೆಂಟ್‌ ಜನರಲ್‌ ರಿಚರ್ಡ್‌: ರಕ್ಷಣಾ ಎಕ್ಸ್‌ಪೋ ಎಲ್ಲಕ್ಕಿಂತ ಹೆಚ್ಚಾಗಿ ಒಂದು ದೇಶದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ. ಏಕೆಂದರೆ ಇದು ಸಂಘಟನಾ ದೇಶದ ಮತ್ತಷ್ಟು ಮುಂದುವರಿಯುವ ಸಾಮರ್ಥ್ಯವನ್ನು ತೋರಿಸುತ್ತದೆ. ರಕ್ಷಣಾ ಡಿಜಿಟಲೀಕರಣದ ವಿಷಯದಲ್ಲಿ ಭಾರತದ ಕಾರ್ಯಕ್ಷಮತೆಯು ಉದಯೋನ್ಮುಖ ರಾಷ್ಟ್ರಗಳ ರಕ್ಷಣೆಯ ಪರಿವರ್ತನೆಗೆ ಭವಿಷ್ಯದ ಹಾದಿಯನ್ನು ತೆರೆಯುತ್ತದೆ. ಮಿಲಿಟರಿ ವ್ಯವಹಾರಗಳಲ್ಲಿನ ಕ್ರಾಂತಿಯು ಇನ್ನು ಮುಂದೆ ಒಂದು ಅನನ್ಯ ಪರಿಕಲ್ಪನೆಯಾಗಿ ಉಳಿಯುವುದಿಲ್ಲ. ಇದ್ದಕ್ಕಿದ್ದಂತೆ, ಗಡಿ ನಿಯಂತ್ರಣ ಅಥವಾ ನಿರ್ದಿಷ್ಟ ರಾಜ್ಯದೊಳಗಿನ ಪ್ರತಿಕೂಲ ಸಶಸ್ತ್ರ ಹೋರಾಟವನ್ನು ನಿಯಂತ್ರಿಸುವ ಅಥವಾ ಪುನರಾವರ್ತನೆಗೊಳ್ಳುವ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಈ ಡಿಜಿಟಲೀಕರಣದ ಬಗ್ಗೆ ಕೆಳಮಟ್ಟದಲ್ಲಿಯೂ ಆಸಕ್ತಿ ಹೆಚ್ಚುತ್ತಿದೆ.

ಪ್ರಶ್ನೆ 5: ಭಾರತ ಮತ್ತು ಮಡಗಾಸ್ಕರ್ ನಡುವೆ ನೀವು ಯಾವ ರೀತಿಯ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ನಿರೀಕ್ಷಿಸುತ್ತೀರಿ?

ಲೆಫ್ಟಿನೆಂಟ್‌ ಜನರಲ್‌ ರಿಚರ್ಡ್‌- ಭಾರತ-ಆಫ್ರಿಕಾ ಸಹಕಾರದ ಚೌಕಟ್ಟಿನೊಳಗೆ ಅಂತಾರಾಷ್ಟ್ರೀಯ ಭದ್ರತೆಯನ್ನು ಸುಧಾರಿಸುವುದು ಯಾವಾಗಲೂ ಉಭಯ ರಾಷ್ಟ್ರಗಳ ನಡುವಿನ ಸ್ನೇಹದ ಗುರಿಯಾಗಿದೆ. ಲಕ್ನೋದಲ್ಲಿನ ಡಿಫೆ ಎಕ್ಸ್​ಪೋ ಹೊರತಾಗಿ, ಮಡಗಾಸ್ಕರ್ ಸೇರಿದಂತೆ ಭಾರತೀಯ ಮತ್ತು ಆಫ್ರಿಕನ್ ದೇಶಗಳ ರಕ್ಷಣಾ ಮಂತ್ರಿಗಳ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಇದೇ ನಿರ್ಣಯ ತೆಗೆದುಕೊಳ್ಳಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ, ದಕ್ಷಿಣ ಆಫ್ರಿಕಾದಲ್ಲಿ ಅಧ್ಯಯನ ಮಾಡಿದ ಗಾಂಧಿಯವರ ಉದಾಹರಣೆಯೊಂದಿಗೆ ಭಾರತಕ್ಕೆ ಆಫ್ರಿಕಾದೊಂದಿಗೆ ನಿಕಟ ಸಂಬಂಧವಿದೆ ಎಂಬುದನ್ನು ಪ್ರಸ್ತಾಪಿಸಲು ನಾವು ಮರೆಯಬಾರದು. ಪ್ರಸ್ತುತ ಪ್ರಧಾನಿ ಮೋದಿ ಜಿಂಬಾಬ್ವೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಒಗ್ಗೂಡದ ದೇಶಗಳನ್ನು ಒಗ್ಗೂಡಿಸುವ ಪರಿಕಲ್ಪನೆಯನ್ನು ಭಾರತವು ಪ್ರಾರಂಭಿಸಿತು ಎಂಬ ಅಂಶವೂ ಇಲ್ಲಿ ಉಲ್ಲೇಖನೀಯ, ಇವೆಲ್ಲವೂ ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ನಮ್ಮನ್ನು ಉತ್ತೇಜಿಸುತ್ತದೆ. ಮಡಗಾಸ್ಕರ್ ಇರುವ ಸಾಗರವು "ಇಂಡಿಯನ್‌" ಎಂಬ ಹೆಸರನ್ನು ಹೊಂದಿದೆ ಮತ್ತು ಇದು ಎಲ್ಲಕ್ಕಿಂತ ಹೆಚ್ಚಾಗಿ, ಸಮ್ಮೇಳನದಲ್ಲಿ ಭಾಗವಹಿಸಿದ ಉಭಯ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸುತ್ತದೆ.

-ಸ್ಮಿತಾ ಶರ್ಮಾ,ನವದೆಹಲಿ

ABOUT THE AUTHOR

...view details