ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಡಿಪಿ ಕುಸಿತ, ಉದ್ಯೋಗ ನಷ್ಟ, ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ, ಗಡಿಯಲ್ಲಿ ಆತಂಕದ ವಾತಾವರಣ ಇತ್ಯಾದಿಗಳು.. "ಮೋದಿ ಸೃಷ್ಟಿಸಿರುವ ವಿಪತ್ತುಗಳು" ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ದೇಶದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಮೋದಿ ಸೃಷ್ಟಿಸಿದವು ಎಂದು ಬಣ್ಣಿಸಿದ್ದಾರೆ.
"ಮೋದಿ ಸೃಷ್ಟಿಸಿರುವ ವಿಪತ್ತುಗಳಾದ ಐತಿಹಾಸಿಕ ಜಿಡಿಪಿ ಕುಸಿತ, 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ, 12 ಕೋಟಿ ಉದ್ಯೋಗ ನಷ್ಟ, ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್-19 ದೈನಂದಿನ ಪ್ರಕರಣಗಳು ಮತ್ತು ಗಡಿಯಲ್ಲಿ ಆಕ್ರಮಣದ ವಾತವಾರಣದಿಂದ ಭಾರತ ತತ್ತರಿಸುತ್ತಿದೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ವಾರಗಳಿಂದ ದೇಶದ ಆರ್ಥಿಕತೆ, ಕೋವಿಡ್-19 ಪರಿಸ್ಥಿತಿ ಮತ್ತು ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಹುಲ್ ಕೇಂದ್ರ ಸರ್ಕಾರವನ್ನು ಪದೇ ಪದೆ ಟೀಕಿಸುತ್ತಿದ್ದಾರೆ.