ಹೈದರಾಬಾದ್:ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ಇಲ್ಲಿ ಧರ್ಮ ಮತ್ತು ಸಂಸ್ಕೃತಿಯ ವೈವಿಧ್ಯತೆ ಲೆಕ್ಕಿಸದೆ ಸಂಘವು ದೇಶದ 130 ಕೋಟಿ ಜನರನ್ನೂ ಹಿಂದೂಗಳೆಂದು ಪರಿಗಣಿಸುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಯಾವುದೇ ಭಾಷೆ ಮಾತನಾಡಲಿ, ಯಾವುದೇ ಧರ್ಮದವರಾಗಿರಲಿ ಭಾರತವನ್ನ ತಾಯಿನಾಡು ಎಂದು ಪರಿಗಣಿಸುವವರನ್ನು ಆರ್‌ಎಸ್‌ಎಸ್, ಹಿಂದೂ ಎಂದು ಕರೆಯುತ್ತದೆ ಎಂದು ಭಾಗವತ್ ಹೇಳಿದ್ದಾರೆ. ಭಾರತದ 130 ಕೋಟಿ ಜನರು ಹಿಂದೂ ಸಮಾಜದವರು. ಆರ್‌ಎಸ್‌ಎಸ್ ಪ್ರತಿಯೊಬ್ಬರನ್ನು ತಮ್ಮವರೇ ಎಂದು ಪರಿಗಣಿಸುತ್ತದೆ ಮತ್ತು ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಎಲ್ಲರನ್ನೂ ಒಂದುಗೂಡಿಸಲು ಸಂಘ ಬಯಸಿದೆ ಎಂದಿದ್ದಾರೆ.