ನವದೆಹಲಿ: ದೇಶದಲ್ಲಿ ಲಾಕ್ಡೌನ್ ಅನ್ಲಾಕ್ ಆದಾಗಿನಿಂದಲೂ ಕೋವಿಡ್-19 ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಇದೀಗ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ.
ದೇಶದಲ್ಲಿ 3 ಲಕ್ಷದ ಗಡಿ ದಾಟಿದ ಕೋವಿಡ್... ಮಹಾರಾಷ್ಟ್ರದಲ್ಲೇ 1 ಲಕ್ಷ ಕೇಸ್ ದಾಖಲು!
ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಇಂದು ಕೂಡ 10 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ ಇದೀಗ 3 ಲಕ್ಷದ ಗಡಿ ದಾಟಿದೆ.
India has reported over three lakh cases
ಮಹಾರಾಷ್ಟ್ರದಲ್ಲಿ 1,01,141 ಕೇಸ್ ದಾಖಲಾಗಿದ್ದು, ಇಂದು ಕೂಡಾ ದಾಖಲೆಯ 3493 ಪಾಸಿಟಿವ್ ಕೇಸ್ ಪತ್ತೆಯಾಗಿವೆ. 127 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 3717ಕ್ಕೆ ಏರಿಕೆಯಾಗಿದೆ. ಉಳಿದಂತೆ ತಮಿಳುನಾಡಿನಲ್ಲಿಂದು 1,982 ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 40,698ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 34,687 ಕೋವಿಡ್ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಕೋವಿಡ್ನಿಂದ 8,498 ಜನರು ಸಾವನ್ನಪ್ಪಿದ್ದು, ಇಂದು ಒಂದೇ ದಿನ 396 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ.