ನವದೆಹಲಿ:ಭಾರತ ಮತ್ತು ಚೀನಾದ ನಡುವಿನ ವಿವಾದಗಳು ಮಾತುಕತೆಯ ಮೂಲಕ ಬಗೆಹರಿಯದಿದ್ದರೆ ಅತಿಕ್ರಮಣ ವಿಷಯದಲ್ಲಿ ಚೀನಾದೊಂದಿಗೆ ವ್ಯವಹರಿಸಲು ನಮಗೆ ಮಿಲಿಟರಿ ಆಯ್ಕೆಗಳಿವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ( ಸಿಡಿಎಸ್) ಬಿಪಿನ್ ರಾವತ್ ಹೇಳಿದ್ದಾರೆ.
ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ನಮ್ಮಲ್ಲಿ 'ಮಿಲಿಟರಿ' ಆಯ್ಕೆಗಳಿವೆ: ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ ರಾವತ್ - ಚೀನಾ ಭಾರತ ಗಡಿ ವಿವಾದ
ಲಡಾಖ್ನಲ್ಲಿ ಚೀನಾ ಸೇನೆ ಅತಿಕ್ರಮಣ ತಡೆಯಲು ನಮ್ಮಲ್ಲಿ ಮಿಲಿಟರಿ ಆಯ್ಕೆಗಳಿವೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ವಿಫಲವಾದರೆ ಮಾತ್ರ ಅದನ್ನು ಬಳಸಿಕೊಳ್ಳುತ್ತೇವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಲಡಾಖ್ನಲ್ಲಿ ಚೀನಾ ಸೇನೆಯ ಅತಿಕ್ರಮಣ ತಡೆಯಲು ನಮ್ಮಲ್ಲಿ ಮಿಲಿಟರಿ ಆಯ್ಕೆಗಳಿವೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ವಿಫಲವಾದರೆ ಮಾತ್ರ ಅದನ್ನು ಬಳಸಿಕೊಳ್ಳುತ್ತೇವೆ ಎಂದು ರಾವತ್ ಹೇಳಿದ್ದಾರೆ. ಭಾರತದ ಭೂ ಪ್ರದೇಶಗಳಾದ ಫಿಂಗರ್ ಪ್ರದೇಶ, ಗಾಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ರಂಗ್ ನಲಾಗಳಲ್ಲಿ ಚೀನಾ ಸೈನ್ಯ ಅತಿಕ್ರಮಣ ಮಾಡಿದೆ. ಈ ವಿಚಾರದಲ್ಲಿ ಕಳೆದ ಏಪ್ರಿಲ್ - ಮೇನಿಂದ ಉಭಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿವೆ.
ಐದು ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆ ಸೇರಿದಂತೆ ಕಳೆದ ಮೂರು ತಿಂಗಳಿಂದ ಉಭಯ ದೇಶಗಳ ನಡುವೆ ಹಲವು ಬಾರಿ ಮಾತುಕತೆ ನಡೆದಿದೆ. ಆದರೆ, ಇದುವರೆಗೂ ಯಾವುದೇ ಫಲ ಕಂಡು ಬಂದಿಲ್ಲ. ಚೀನಾ ಸೇನೆ ಅತಿಕ್ರಮಣ ಮಾಡಿಕೊಂಡಿರುವ ಫಿಂಗರ್ ಪ್ರದೇಶದಿಂದ ಸಂಪೂರ್ಣವಾಗಿ ಹಿಂದಕ್ಕೆ ಹೋಗಲು ನಿರಾಕರಿಸಿದೆ. ಇನ್ನೂ ವಿವಾದಿತ ಫಿಂಗರ್ ಪ್ರದೇಶವನ್ನು ಹಂಚಿಕೊಳ್ಳುವ ಚೀನಾದ ವಾದವನ್ನು ಭಾರತ ವಿರೋಧಿಸಿದೆ.