ತಿರುವನಂತಪುರಂ:ಭಾರತದಲ್ಲಿ 2007ರಲ್ಲೇ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ತಯಾರಿಸಿತ್ತು. ಆದರೆ ರಾಜಕೀಯ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದ ಪರೀಕ್ಷಾರ್ಥ ಪ್ರಯೋಗ ಸಾಧ್ಯವಾಗಲಿಲ್ಲ ಎಂದು ಇಸ್ರೋ ಮಾಜಿ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದ್ದಾರೆ.
2007ರಲ್ಲಿ ಚೀನಾ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ಪರೀಕ್ಷೆ ನಡೆಸಿತ್ತು. ಇದೇ ವೇಳೆ ಭಾರತವೂ ಇಂತಹ ಪರೀಕ್ಷಾರ್ಥ ಪ್ರಯೋಗಕ್ಕೆ ಸಮರ್ಥವಾಗಿತ್ತು ಎನ್ನುವ ವಿಚಾರವನ್ನು ಜಿ.ಮಾಧವನ್ ನಾಯರ್ ಹೇಳಿದ್ದಾರೆ.