ನವದೆಹಲಿ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ತೀವ್ರ ಆಸಕ್ತಿ ತೋರಿಸಿದೆ. ಚೀನಾದ ವಿಸ್ತರಣಾವಾದಿ ಕಾರ್ಯಕ್ರಮ ಹಾಗೂ ಆಕ್ರಮಣಕಾರಿ ನೀತಿಯ ದವನಕ್ಕಾಗಿ ಭಾರತ ಆಸ್ಟ್ರೇಲಿಯಾವನ್ನ ಸಮರಾಭ್ಯಾಸದಲ್ಲಿ ಸೇರಿಸಿಕೊಳ್ಳುವ ತೀರ್ಮಾನಕ್ಕೆ ಬಂದಿದೆ.
ಚೀನಾ ಮಣಿಸಲು ರಚನೆಯಾಗ್ತಿದೆ ನಾಲ್ಕು ರಾಷ್ಟ್ರಗಳ ಒಕ್ಕೂಟ: ಜಲ ದಿಗ್ಬಂಧನಕ್ಕೆ ಸಿದ್ಧತೆ - ನೌಕಾ ಸಮರಾಭ್ಯಾಸ
ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ತೀವ್ರ ಆಸಕ್ತಿ ತೋರಿದೆ. ಮುಂದಿನ ಎರಡು ವಾರಗಳಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಾಲ್ಕು ಸದಸ್ಯರ ಒಕ್ಕೂಟ ರಚಿಸುವ ಗುರಿಯನ್ನ ಹೊಂದಲಾಗಿದ್ದು, ಇಂಡೋ - ಪೆಸಿಫಿಕ್ ಸಮುದ್ರ ಭಾಗದಲ್ಲಿ ಶಾಂತಿ ಕಾಪಾಡುವ ಗುರಿ ಹೊಂದಿದೆ. ನವೆಂಬರ್ 2017ರಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳು ಇಂಡೋ-ಪೆಸಿಫಿಕ್ ಸಮುದ್ರದ ಮಾರ್ಗಗಳನ್ನು ಯಾವುದೇ ಆಕ್ರಮಣದಿಂದ ಮುಕ್ತವಾಗಲು ಮತ್ತು ಇಲ್ಲಿನ ಸುರಕ್ಷತೆಗಾಗಿ ಚತುರ್ರಾಷ್ಟ್ರ ಒಕ್ಕೂಟ ರಚನೆ ಮಾಡುವ ನಿರ್ಧಾರಕ್ಕೆ ಬಂದು ಅದಕ್ಕೆ ಒಂದು ಆಕಾರ ನೀಡುವ ಪ್ರಯತ್ನ ಮಾಡಿತ್ತು.
ಈ ಪ್ರಯತ್ನದ ಭಾಗವಾಗಿ ಮಲಬಾರ್ ನೌಕಾ ಕಸರತ್ತಿನಲ್ಲಿ ಆಸ್ಟ್ರೇಲಿಯಾವನ್ನ ಹಾಗೂ ಅದರ ಆಸಕ್ತಿಯನ್ನ ಪರಿಗಣಿಸಿ ಒಕ್ಕೂಟದ ಭಾಗವಾಗಿಸಿಕೊಳ್ಳಲು ಭಾರತ ನಿರ್ಧರಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮೂಲಕ ಚೀನಾಕ್ಕೆ ಎಚ್ಚರಿಕೆ ನೀಡಲು ಭಾರತ ಸನ್ನದ್ಧವಾಗ್ತಿದೆ.