ನವದೆಹಲಿ:ವಿಶ್ವದ ವಿವಿಧ ದೇಶಗಳಲ್ಲಿ ಜನರಿಗೆ ಆಹಾರ ಮತ್ತು ಪೌಷ್ಟಿಕತೆ ಲಭ್ಯತೆಯನ್ನು ಅಳೆಯುವ 'ಜಾಗತಿಕ ಹಸಿವಿನ ಸೂಚ್ಯಂಕ'ದಲ್ಲಿ ಭಾರತದ ಶ್ರೇಯಾಂಕ ಗಣನೀಯವಾಗಿ ಕುಸಿದಿದೆ. ಇದು ಭಾರತದಲ್ಲಿನ ಅಪೌಷ್ಟಿಕತೆಗೆ ಹಿಡಿದಿರುವ ಕೈಗನ್ನಡಿಯಂತಿದೆ. ವಿಶ್ವದಾದ್ಯಂತ ಅಪೌಷ್ಟಿಕತೆ, ಮಕ್ಕಳ ಅಪೌಷ್ಟಿಕತೆ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಪತ್ತೆ ಹಚ್ಚುವ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 107 ದೇಶಗಳಲ್ಲಿ 94 ನೇ ಸ್ಥಾನದಲ್ಲಿದೆ.
ಈ ಸೂಚ್ಯಂಕದ ಪ್ರಕಾರ ನೆರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಕ್ಕಿಂಲೂ ಭಾರತ ಕೆಳಸ್ಥಾನದಲ್ಲಿದೆ. ಜಗತ್ತಿನಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆ ಲೆಕ್ಕಹಾಕುವ ಜಾಗತಿಕ ಹಸಿವು ಸೂಚ್ಯಂಕ-2020 ಅನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು, ಪಾಕಿಸ್ತಾನ 88 ನೇ ಸ್ಥಾನದಲ್ಲಿದ್ದರೆ, ನೇಪಾಳ ಮತ್ತು ಬಾಂಗ್ಲಾದೇಶ ಕ್ರಮವಾಗಿ 73 ಮತ್ತು 75 ನೇ ಸ್ಥಾನದಲ್ಲಿವೆ.