ಕರ್ನಾಟಕ

karnataka

ETV Bharat / bharat

ಚೀನಾ ಬಳಿಕ ಭಾರತಕ್ಕೆ ನೇಪಾಳದ್ದೇ ಸಮಸ್ಯೆ!

ಭಾರತದ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾವನ್ನು ಒಳಗೊಂಡಿರುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳ ಸರ್ಕಾರ ಅನುಮೋದಿಸಿದ ನಿರ್ಧಾರದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ದೀರ್ಘಕಾಲದ ಉದ್ವಿಗ್ನತೆ ಹೊಸ ಮಟ್ಟಕ್ಕೆ ತಲುಪುತ್ತಿದೆ.

army
army

By

Published : Jun 23, 2020, 12:23 PM IST

ನವದೆಹಲಿ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನದಿಯೊಂದರಲ್ಲಿ ನಡೆಸುತ್ತಿರುವ ಪ್ರವಾಹ ನಿಯಂತ್ರಣ ಕಾರ್ಯವನ್ನು ನಿಲ್ಲಿಸಲು ನೇಪಾಳ ನಿರ್ಧರಿಸಿದೆ.

ತನ್ನ ಭೂಪ್ರದೇಶವನ್ನು ಉಳಿಸಿಕೊಳ್ಳಲು ಚೀನಾದೊಂದಿಗೆ ಭಾರತ ಘರ್ಷಣೆಯಲ್ಲಿ ತೊಡಗಿರುವ ಈ ಸಮಯದಲ್ಲಿ ಭಾರತ ಹಾಗೂ ನೇಪಾಳ ಸಂಬಂಧ ಹೊಸ ಮಟ್ಟಕ್ಕೆ ತಲುಪಲಿದೆ.

ಇದೇ ತಿಂಗಳಿನಲ್ಲಿ ಭಾರತ ಹಾಗೂ ನೇಪಾಳ ದೇಶಗಳ ಗಡಿಯಲ್ಲಿ ಸಮಸ್ಯೆ ಉದ್ಭವಿಸಿದ ಎರಡನೇ ಉದಾಹರಣೆ ಇದಾಗಿದೆ. ಜೂನ್ 12ರಂದು, ಬಿಹಾರದ ಸೀತಾಮಾರ್ಹಿ ಜಿಲ್ಲೆಯ ಜನರ ಗುಂಪಿನ ಮೇಲೆ ನೇಪಾಳದ ಸಶಸ್ತ್ರ ಪೊಲೀಸರು ಗುಂಡು ಹಾರಿಸಿದ ಪರಿಣಾಮವಾಗಿ ಒಬ್ಬ ಭಾರತೀಯ ಪ್ರಜೆ ಮೃತಪಟ್ಟಿದ್ದು, ಕನಿಷ್ಠ ಇಬ್ಬರು ಗಾಯಗೊಂಡಿದ್ದರು.

ಭಾರತದ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾವನ್ನು ಒಳಗೊಂಡಿರುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳ ಸರ್ಕಾರ ಅನುಮೋದಿಸಿದ ನಿರ್ಧಾರದ ಬೆನ್ನಲ್ಲೇ, ಈ ಘಟನೆಗಳು ಉಭಯ ದೇಶಗಳ ನಡುವಿನ ದೀರ್ಘಕಾಲದ ಉದ್ವಿಗ್ನತೆಯನ್ನು ಒತ್ತಿ ಹೇಳುತ್ತಿವೆ.

ಪ್ರತಿ ಮಳೆಗಾಲದಲ್ಲಿ ನೇಪಾಳದಿಂದ ಭಾರತಕ್ಕೆ ನದಿ ನೀರು ಹರಿದು ಬಂದು ಬಿಹಾರಕ್ಕೆ ಹಾನಿಯುಂಟುಮಾಡುತ್ತದೆ. ಭಾರತವು ನದಿಯಲ್ಲಿ ಹಲವಾರು ಒಡ್ಡುಗಳನ್ನು ನಿರ್ಮಿಸಿದೆ. ಮಳೆಗಾಲ ಆರಂಭವಾಗುವ ಮೊದಲು ಪ್ರತಿವರ್ಷ ಅವುಗಳನ್ನು ಭದ್ರಪಡಿಸಲಾಗುತ್ತದೆ.

ಆದ್ರೆ ಈ ವರ್ಷ ನೇಪಾಳ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ಪೂರ್ವ ಚಂಪಾರಣ್​ ಜಿಲ್ಲೆಯ ನದಿಯಲ್ಲಿ ಭಾರತದ ಬಿಹಾರ ರಾಜ್ಯ ಕೈಗೊಂಡ ಪ್ರವಾಹ ನಿಯಂತ್ರಣ ಕ್ರಮಗಳನ್ನು ತಡೆದಿದ್ದಾರೆ.

ABOUT THE AUTHOR

...view details