ನವದೆಹಲಿ:ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇದೀಗ ಐದು ಲಕ್ಷ ಗಡಿ ದಾಟಿದೆ. ಇಂದು ಕೂಡ 17 ಸಾವಿರಕ್ಕೂ ಅಧಿಕ ಕೇಸ್ ದೇಶದಲ್ಲಿ ಹೊಸದಾಗಿ ದಾಖಲಾಗಿವೆ.
ಮಹಾರಾಷ್ಟ್ರದಲ್ಲೇ ಇಂದು ಬರೋಬ್ಬರಿ 5,024 ಸಾವಿರ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,52,765 ಆಗಿದೆ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲೂ ದಾಖಲೆ ಪ್ರಮಾಣದ ಕೊರೊನಾ ಪ್ರಕರಣ ದಾಖಲಾಗಿವೆ.
ದೆಹಲಿಯಲ್ಲಿಂದು 3,460 ಹೊಸ ಕೇಸ್ ಕಾಣಿಸಿಕೊಂಡಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 77,240 ಆಗಿದೆ. ಗುಜರಾತ್ನಲ್ಲಿ 580 ಪ್ರಕರಣ ಕಾಣಿಸಿಕೊಂಡಿವೆ. ಕರ್ನಾಟಕದಲ್ಲೂ 445 ಕೇಸ್ ಇಂದು ಸಿಕ್ಕಿದ್ದು, ಪಶ್ಚಿಮ ಬಂಗಾಳದಲ್ಲಿ 542 ಪ್ರಕರಣ ಕಾಣಿಸಿಕೊಂಡಿವೆ.ಇನ್ನು ತಮಿಳುನಾಡಿನಲ್ಲಿ ಇಂದೇ 3 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿವೆ.
ಸದ್ಯ ಭಾರತದಲ್ಲಿ 1ಲಕ್ಷ 95 ಸಾವಿರಕ್ಕೂ ಅಧಿಕ ಆ್ಯಕ್ಟಿವ್ ಕೇಸ್ಗಳಿದ್ದು, 16 ಸಾವಿರ ಜನರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. ಸದ್ಯ ಭಾರತ ಪ್ರಪಂಚದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಅಮೆರಿಕ, ಬ್ರೇಜಿಲ್ ಹಾಗೂ ರಷ್ಯಾ ಕ್ರಮವಾಗಿ ಮೂರು ಸ್ಥಾನದಲ್ಲಿವೆ. ಇನ್ನು ಪ್ರಪಂಚದಾದ್ಯಂತ ಒಟ್ಟು ಕೋವಿಡ್ ಸಂಖ್ಯೆ 1 ಕೋಟಿ ದಾಟಿದೆ.