ಕರ್ನಾಟಕ

karnataka

ETV Bharat / bharat

ಚೀನಾದಲ್ಲಿರುವ ಭಾರತೀಯರ ರಕ್ಷಣೆಗೆ ಸತತ ಪ್ರಯತ್ನ: ಸಚಿವ ಎಸ್. ಜೈಶಂಕರ್ - ಭಾರತೀಯರನ್ನು ರಕ್ಷಿಸುವ ಕಾರ್ಯ

ದೆಹಲಿಯ ಬಿಜೆಪಿಯ ದಕ್ಷಿಣ ಭಾರತದ ಸೆಲ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್​​. ಜೈಶಂಕರ್​ ಅವರು, ಭಾರತೀಯರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದಿದ್ದಾರೆ.

EAM Jaishankar
ಕೇಂದ್ರ ವಿದೇಶಾಂಗ ಸಚಿವ ಎಸ್​​. ಜೈಶಂಕರ್

By

Published : Feb 2, 2020, 12:55 PM IST

ನವದೆಹಲಿ:ಚೀನಾದ ವುಹಾನ್ ನಗರದಲ್ಲಿದ್ದ ಭಾರತೀಯರನ್ನು ಕರೆತರಲು ತೆರಳಿರುವ ಎರಡನೇ ವಿಮಾನ ದೆಹಲಿ ತಲುಪಿದ ಬಳಿಕ, ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಚೀನಾದ ವುಹಾನ್​​ ನಗರದಲ್ಲಿರುವ ಭಾರತೀಯರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಚುನಾವಣೆ ಇರುವ ಹಿನ್ನೆಲೆ ಬಿಜೆಪಿಯ ದಕ್ಷಿಣ ಭಾರತದ ಸೆಲ್​ನಲ್ಲಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಅವರು, ಚೀನಾದ ಕೊರೊನಾ ವೈರಸ್ ಪೀಡಿತ ಭಾಗಗಳಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಎರಡು ವಿಮಾನಗಳ ಮೂಲಕ ಭಾರತೀಯರನ್ನು ಕರೆದುಕೊಂಡು ಬರಲಾಗಿದೆ. ಭಾರತೀಯರನ್ನು ಚೀನಾದಿಂದ ರಕ್ಷಿಸಲು ಕೆಂದ್ರ ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವರು ಅಭಯ ನೀಡಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವ ಎಸ್​​. ಜೈಶಂಕರ್

"ನಾನು ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವುದರಿಂದ, ವಿಶ್ವವು ಭಾರತವನ್ನು ಹೇಗೆ ನೋಡುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. 2014 ರ ನಂತರ ಮೋದಿ ಅವರು ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದ ನಂತರ ಭಾರತೀಯರ ಮೇಲಿನ ಗೌರವ ಹೆಚ್ಚಾಗಿದೆ" ಇದೇ ವೇಳೆ ಅವರು ಹೇಳಿದ್ರು.

ಈ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಸದಾನಂದ ಗೌಡರು, ಭಾರತ ಮತ್ತು ಭಾರತೀಯರ ಗೌರವವೂ ಜಗತ್ತಿನಾದ್ಯಂತ ಹೆಚ್ಚಾಗಿದ್ದು, ಇದಕ್ಕೆ ಮೋದಿ ನಮ್ಮ ಆಡಳಿತ ವೈಖರಿಯೇ ಕಾರಣವಾಗಿದೆ. "2014 ಕ್ಕಿಂತ ಮೊದಲು, ವಿದೇಶದಲ್ಲಿ ನೆಲೆಸಿದ್ದ ಭಾರತೀಯರು ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಮುಜುಗರ ಅನುಭವಿಸಿದ್ದರು. ಆದರೆ, ಈಗ ಇಂತಹ ಸಂದರ್ಭವಿಲ್ಲ ಎಂದರು.

ABOUT THE AUTHOR

...view details