ನವದೆಹಲಿ:ಭಾರತ ಮತ್ತು ಚೀನಾದ ಗಡಿ ಸಂಘರ್ಷ ನಿಯಂತ್ರಣ ಸಂಬಂಧ ಉಭಯ ರಾಷ್ಟ್ರಗಳು ಇಂದು ಎಲ್‌ಎಸಿ (ವಾಸ್ತವಿಕ ಗಡಿ ರೇಖೆ)ಯ ಮೊಲ್ಡೊ ಪ್ರದೇಶದಲ್ಲಿ ಕಮಾಂಡರ್ ಹಂತದ ಮಾತುಕತೆ ನಡೆಸಲಿವೆ.
ಭಾರತ - ಚೀನಾ ಗಡಿ ಸಂಘರ್ಷ: ಇಂದು 5ನೇ ಸುತ್ತಿನ ಕಮಾಂಡರ್ ಹಂತದ ಮಾತುಕತೆ
ಇಂದು ಭಾರತ ಮತ್ತು ಚೀನಾ ವಾಸ್ತವಿಕ ಗಡಿ ರೇಖೆಯ ಮೊಲ್ಡೊ ಪ್ರದೇಶದಲ್ಲಿ ಉಭಯ ರಾಷ್ಟ್ರಗಳು ಕಮಾಂಡರ್ ಹಂತದ ಮಾತುಕತೆ ನಡೆಸಲಿವೆ.
ಕಮಾಂಡರ್ ಹಂತದಲ್ಲಿ ಎರಡು ದೇಶಗಳ ನಡುವೆ ನಡೆಯುತ್ತಿರುವ ಐದನೇ ಸುತ್ತಿನ ಮಾತುಕತೆ ಇದಾಗಿದ್ದು, ಫಿಂಗರ್ ಪ್ರದೇಶದಿಂದ ಚೀನಾ ಸಂಪೂರ್ಣ ಹಿಂದೆ ಸರಿಯುವ ಕುರಿತು ಭಾರತ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಲಡಾಖ್ನ ಗಾಲ್ವಾನ್ ಕಣಿವೆಯಿಂದ ಸೈನ್ಯದ ತೆರವಿಗೆ ಈ ಹಿಂದೆ ಜೂನ್ 6, 22, 30 ಮತ್ತು ಜುಲೈ 14 ರಂದು ಕಮಾಂಡರ್ ಹಂತದ ಮಾತುಕತೆಗಳು ನಡೆದಿದ್ದವು. ಇದಕ್ಕೂ ಸಹಮತ ಸೂಚಿಸಿದ್ದ ಭಾರತ ಮತ್ತು ಚೀನಾ, ಕೆಲವು ಪ್ರದೇಶಗಳಿಂದ ತಮ್ಮ ಸೇನೆಯನ್ನು ಹಿಂದಕ್ಕೆ ಸರಿಸಿತ್ತು. ಅಲ್ಲದೇ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಭಾರತ ಪುನರುಚ್ಚರಿಸಿತ್ತು.