ಕರ್ನಾಟಕ

karnataka

ETV Bharat / bharat

ಎಲ್​ಎಸಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಚೀನಾದೊಂದಿಗೆ ಮುಂದುವರೆದ ಮಾತುಕತೆ - ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​

ಚೀನಾ ಭಾರತದ ಗಡಿಯಲ್ಲಿ ಸೇನೆ ನಿಯೋಜಿಸಿದಾಗಿನಿಂದ ಎಲ್​ಎಸಿಯಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದು, ಹಲವು ಹಂತದ ಮಾತುಗಳು ನಡೆಯುತ್ತಿವೆ.

India, China military
ಭಾರತ, ಚೀನಾ ಸೇನೆ

By

Published : Jun 11, 2020, 11:31 AM IST

ನವದೆಹಲಿ: ಚೀನಾ, ಪೂರ್ವ ಲಡಾಖ್​ನ ಎಲ್​ಎಸಿ (ಲೈನ್​ ಆಫ್​ ಆಕ್ಚುವಲ್ ಕಂಟ್ರೋಲ್​) ಬಳಿ ಸೇನೆ ನಿಯೋಜಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಸೇನಾ ಮಾತುಕತೆಗಳು ಮುಂದುವರೆಯುತ್ತವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಮೇಜರ್ ಜನರಲ್​, ಬೆಟಾಲಿಯನ್​ ಹಂತದ ಮಾತುಕತೆಗಳು ನಡೆದಿದ್ದು, ವಿವಾದದ ಕೇಂದ್ರ ಬಿಂದುವಾದ ಚುನ್​ಶುಲ್​ನಲ್ಲಿ ವಿವಿಧ ಹಂತದ ಮಾತುಕತೆಗಳು ನಡೆಯುವ ಭರವಸೆಯಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಈ ಮಾತುಕತೆಗಳು ಗಲ್ವಾನಾ ಪ್ರದೇಶದ ಗಸ್ತು ಕೇಂದ್ರ 14, 114 ಬ್ರಿಗೇಡ್​ ಪ್ರದೇಶದ ಗಸ್ತು ಕೇಂದ್ರ 15 ಹಾಗೂ ಹಾಟ್​ಸ್ಪ್ರಿಂಗ್​ ಪ್ರದೇಶದ ಗಸ್ತು ಕೇಂದ್ರ 17 ವಿವಾದವನ್ನು ಬಗೆಹರಿಸುವ ಸಾಧ್ಯತೆಗಳಿವೆ.

ಇದಕ್ಕೂ ಮೊದಲು ಜೂನ್​ 6ರಂದು ಮಿಲಿಟರಿ ಕಮಾಂಡರ್ ಹಂತದ ಮಾತುಕತೆ ನಡೆದಿತ್ತು. ಇದರಲ್ಲಿ ಭಾರತದ ಲೆಫ್ಟಿನೆಂಟ್​ ಜನರಲ್​ ಹರೀಂದರ್ ಸಿಂಗ್ ಹಾಗೂ​ ಚೀನಾದ ಮಜ್​ ಜೆನ್​ ಲಿಯು ಲಿನ್​ ನಡುವೆ ಮಾತುಕತೆ ಅಷ್ಟೇನೂ ಫಲಪ್ರದವಾಗಿರಲಿಲ್ಲ. ಈ ನಡುವೆಯೂ ಸಮಸ್ಯೆ ಪರಿಹಾರಕ್ಕಾಗಿ ಮಾತುಕತೆಗಳು ಮುಂದುವರೆದಿದ್ದು, ಆಶಾ ಭಾವನೆ ಮೂಡಿಸಿದೆ.

ABOUT THE AUTHOR

...view details