ನವದೆಹಲಿ:ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯಲಿರುವ ಕವ್ಕಾಜ್ -2020 (ಕಾಕಸಸ್ 2020) ಬಹುರಾಷ್ಟ್ರಗಳ ಸೇನಾ ತಾಲೀಮಿನಲ್ಲಿ ಭಾರತದ ಸುಮಾರು 200 ಸಿಬ್ಬಂದಿಯ ಮೂರು ಸೇನಾ ತುಕಡಿ ಭಾಗವಹಿಸಲಿವೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಕಝಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಒಳಗೊಂಡ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸದಸ್ಯರನ್ನು ಹೊರತುಪಡಿಸಿ, ಇತರ 11 ದೇಶಗಳು ಈ ತಾಲೀಮಿನ ಭಾಗವಾಗಲಿವೆ. ಮಂಗೋಲಿಯಾ, ಸಿರಿಯಾ, ಇರಾನ್, ಈಜಿಪ್ಟ್, ಬೆಲಾರಸ್, ಟರ್ಕಿ, ಅರ್ಮೇನಿಯಾ, ಅಬ್ಖಾಜಿಯಾ, ದಕ್ಷಿಣ ಒಸ್ಸೆಟಿಯಾ, ಅಜೆರ್ಬೈಜಾನ್ ಮತ್ತು ತುರ್ಕಮೆನಿಸ್ತಾನ್ ಪಾಲ್ಗೊಳ್ಳಲಿವೆ.
ಇತರ ದೇಶಗಳ ಜೊತೆಗೆ ಚೀನಾ ಮತ್ತು ಪಾಕಿಸ್ತಾನದ ಸೈನಿಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.