ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ತಿಳಿಗೊಳಿಸಲು ವಿಶ್ವದಲ್ಲೇ ಪ್ರಬಲ ಸೇನೆ ಹೊಂದಿರುವ ಉಭಯ ದೇಶಗಳ ಲೆಫ್ಟಿನೆಂಟ್ ಜನರಲ್ ಅಧಿಕಾರಿಗಳು ಪೂರ್ವ ಲಡಾಖ್ ಭಾಗದ ಚೀನಾದ ಚುಶುಲ್ - ಮೊಲ್ಡೊ ಗಡಿಭಾಗದಲ್ಲಿ ಶನಿವಾರ ಭೇಟಿಯಾಗಿದ್ದಾರೆ.
ಹಲವು ದಿನಗಳಿಂದ ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ನಡುವೆ ನಡೆಯುತ್ತಿರುವ ಮಾತುಕತೆಯು 'ಯುದ್ಧತಂತ್ರ' ಎಂದು ಮೇಲ್ನೋಟಕ್ಕೆ ತೋರುತ್ತದೆಯಾದರೂ, ಇದರ ಪರಿಣಾಮಗಳು 'ಕಾರ್ಯತಂತ್ರ'ಗಳನ್ನು ರೂಪಿಸುವಲ್ಲಿ ಮಹತ್ವ ಪಡೆದಿದೆ.
ಸದ್ಯ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಭಯ ರಾಷ್ಟ್ರಗಳು ಹೇಳಿಕೊಳ್ಳುವುದರೊಂದಿಗೆ, ಗಡಿ ಭಾಗದಲ್ಲಿ ಪರಿಸ್ಥಿತಿ ತಿಳಿಗೊಳ್ಳುವ ಮುನ್ಸೂಚನೆ ನೀಡಿದೆ.
ಮಾತುಕತೆಯ ಮೂರು ಪ್ರಮುಖ ಅಂಶಗಳು
-ಮೇ 5 ಹಾಗೂ 6 ರಂದು ಪಾಂಗೊಂಗ್ ಸರೋವರದ ಉತ್ತರದ ದಂಡೆಯಲ್ಲಿ ಸೈನಿಕರ ಮೇಲೆ ನಡೆದ ಹಿಂಸಾಚಾರ