ನವದೆಹಲಿ: ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯು ದೊಡ್ಡ ಯಶಸ್ಸು ಕಂಡಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಶ್ಲಾಘಿಸಿದ್ದಾರೆ.
ಭಾರತದ ಆತಿಥ್ಯಕ್ಕೆ ಮನಸೋತ ಚೀನಾ... ಡ್ರ್ಯಾಗನ್- ಆನೆ ಈಗ ಜಗತ್ತಿನ ಬಿಗ್ ಬ್ರದರ್ಸ್ - ಭಾರತ- ಚೀನಾ
ಮೋದಿ-ಜಿನ್‌ಪಿಂಗ್ ಅವರ 2ನೇ ಅನೌಪಚಾರಿಕ ಶೃಂಗದ ಆತಿಥ್ಯಕ್ಕೆ ಭಾರತದಲ್ಲಿನ ಚೀನಾ ರಾಯಭಾರಿ ಸನ್ ವೀಡಾಂಗ್ ಅವರು ಮನಸೋತಿದ್ದಾರೆ. ಭಾರತ ಮತ್ತು ತಮಿಳುನಾಡು ಸರ್ಕಾರಗಳು ನೀಡಿದ್ದ ಆತಿಥ್ಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಚೀನಾ-ಭಾರತ ಸಂಬಂಧಗಳು ಹೊಸ ಯುಗವನ್ನು ಪ್ರವೇಶಿಸಲಿವೆ. ಡ್ರ್ಯಾಗನ್ ಮತ್ತು ಆನೆ ಜಂಟಿಯಾಗಿರಲಿವೆ. ದೇಶ ಮತ್ತು ಜನರ ಉತ್ತಮ ಭವಿಷ್ಯಕ್ಕಾಗಿ ಹಾಗೂ ಪ್ರಪಂಚದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ಆಶಿಸಿದ್ದಾರೆ.

ಸಾಂದರ್ಭಿಕ ಚಿತ್ರ
'ಭಾರತ ಮತ್ತು ತಮಿಳುನಾಡು ಸರ್ಕಾರಗಳು ನೀಡಿದ್ದ ಆತಿಥ್ಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಚೀನಾ-ಭಾರತ ಸಂಬಂಧಗಳು ಹೊಸ ಯುಗವನ್ನು ಪ್ರವೇಶಿಸಲಿವೆ' ಎಂದು ಸನ್ ವೀಡಾಂಗ್ ಸರಣಿ ಟ್ವೀಟ್ ಮಾಡಿದ್ದಾರೆ.
ವುಹಾನ್‌ನಿಂದ ಚೆನ್ನೈವರೆಗೆ, ಯಾಂಗ್ಟ್ಜಿ ನದಿಯಿಂದ ಗಂಗಾ ನದಿವರೆಗೆ ಚೀನಾ ಮತ್ತು ಭಾರತ ಕೈಜೋಡಿಸಿ ಒಟ್ಟಾಗಿ ನಿಲ್ಲುತ್ತವೆ. ಡ್ರ್ಯಾಗನ್ ಮತ್ತು ಆನೆ ಜಂಟಿಯಾಗಿರಲಿವೆ. ದೇಶ ಮತ್ತು ಜನರ ಉತ್ತಮ ಭವಿಷ್ಯಕ್ಕಾಗಿ ಹಾಗೂ ಪ್ರಪಂಚದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ಟ್ವಿಟ್ಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.