ಮುಂಬೈ: ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕಾರಣ ದೇಶಾದ್ಯಂತ ಮಾರ್ಚ್ 22ರಂದು ಬೆಳಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆವರೆಗೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಇದೀಗ ದೇಶದ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಂ ಇಂಡಿಯಾದ ಅನೇಕ ಕ್ರಿಕೆಟರ್ಸ್ ತಮ್ಮ ಬೆಂಬಲ ಸೂಚಿಸಿ ಟ್ಟೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ
ಎಚ್ಚರಿಕೆಯಿಂದ ಕೋವಿಡ್ 19 ಎದುರಿಸಲು ಜಾಗರೂಕರಾಗಿರಿ. ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಘೋಷಣೆ ಮಾಡಿರುವಂತೆ ಜವಾಬ್ದಾರಿಯುತ ನಾಗರಿಕರಾದ ನಾವು ಸುರಕ್ಷತೆಗಾಗಿ ಜಾರಿಗೆ ತಂದಿರುವ ನಿಯಮ ಪಾಲಿಸಬೇಕಾಗಿದೆ ಎಂದಿರುವ ಅವರು ಭಾರತ ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದಿದ್ದಾರೆ.
ಅಲ್ಲದೆ, ಕೊರೊನಾ ವೈರಸ್ ವಿರುದ್ಧ ಹೋರಾಡಲು ಮುಂದಾಗಿರುವ ದೇಶದ ಮತ್ತು ಜಗತ್ತಿನ ಎಲ್ಲ ವೈದ್ಯಕೀಯ ವೃತ್ತಿಪರರಿಗೆ ಧನ್ಯವಾದ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಇವರಿಗೆ ಸಹಾಯ ಮಾಡಿ ಎಂದಿದ್ದಾರೆ.
ರವಿಶಾಸ್ತ್ರಿ
ಪ್ರಧಾನಿ ಮೋದಿಯವರ ಕರೆ ನೀಡಿರುವ ಜನತಾ ಕರ್ಫ್ಯೂಗೆ ನನ್ನ ಸಪೋರ್ಟ್ ಇದೆ. ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆವರೆಗೆ ಈ ಕರೆಯಲ್ಲಿ ನಾವು ಭಾಗಿಯಾಗಬೇಕಾಗಿದೆ ಎಂದಿದ್ದಾರೆ.
ಆರ್.ಅಶ್ವಿನ್