ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನಡುವೆ ಇಂದು ನಡೆದ ಮೊದಲ ಶೃಂಗಸಭೆಯು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸುವ ಬದ್ಧತೆ ಪುನರುಚ್ಚರಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಡಲ ಸಹಕಾರ ಮತ್ತು ಮ್ಯೂಚುವಲ್ ಲಾಜಿಸ್ಟಿಕ್ಸ್ ಬೆಂಬಲ ವ್ಯವಸ್ಥೆ ಇಂಡೋ - ಪೆಸಿಫಿಕ್ ಕಾರ್ಯತಂತ್ರದ ಮೇಲೆ ಕೇಂದ್ರೀಕೃತವಾಗಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಶೀಲತೆ ಮತ್ತು ಹಿಂದೂ ಮಹಾಸಾಗರ ಪ್ರದೇಶ ಮತ್ತು ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಕಾರ್ಯಾಚರಣೆಯ ಮೇಲೆ ಕಣ್ಣಿಟ್ಟಿರುವ ಎರಡು ದೇಶಗಳು ಈ ಕುರಿತು ರಕ್ಷಣಾ ಪಡೆಗಳ ಪರಸ್ಪರ ಸಹಕಾರ ನೀಡಲು ತೀರ್ಮಾನಿಸಿದವು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಮಗ್ರ ಕಾರ್ಯತಂತ್ರದಲ್ಲಿ ಸಹಭಾಗಿತ್ವ ಇರಲಿದೆ ಎಂದು ಉಭಯ ದೇಶಗಳು ತಿಳಿಸಿವೆ. ಇದು ಭಾರತ-ಆಸ್ಟ್ರೇಲಿಯಾ ರಕ್ಷಣಾ ಸಹಕಾರವನ್ನು ಹೆಚ್ಚು ಅರ್ಥಪೂರ್ಣವಾಗಿಸಲಿದೆ.