ಕರ್ನಾಟಕ

karnataka

ETV Bharat / bharat

ಶ್ರೀಲಂಕಾಗೆ ಅನಗತ್ಯ ಪ್ರವಾಸ ಹೋಗದಂತೆ ಭಾರತ ಎಚ್ಚರಿಕೆ - undefined

ಕಳೆದ ಈಸ್ಟರ್​ ಭಾನುವಾರದಂದು ಶ್ರೀಲಂಕಾದ ಎಂಟು ಕಡೆ ಸರಣಿ ಸ್ಫೋಟ ನಡೆದು 300ಕ್ಕೂ ಅಧಿಕ ಜನ ಬಲಿತೆಗೆದುಕೊಂಡ ಬಳಿಕ ಉದ್ಭವಿಸಿದ ಭದ್ರತಾ ಬೆದರಿಕೆಗಳ ಕಾರಣಕ್ಕೆ ಕೇಂದ್ರ ಸರ್ಕಾರ ಈ ಸಲಹೆ ನೀಡಿದೆ.

ಚಿತ್ರ ಕೃಪೆ: ಗೆಟ್ಟಿ

By

Published : Apr 28, 2019, 10:11 AM IST

ನವದೆಹಲಿ: ಈಸ್ಟರ್ ಭಾನುವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದ್ವೀಪ ರಾಷ್ಟ್ರಕ್ಕೆ ಅನಗತ್ಯ ಪ್ರವಾಸ ಕೈಗೊಳ್ಳದಂತೆ ಭಾರತ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಕಳೆದ ಈಸ್ಟರ್​ ಭಾನುವಾರದಂದು ಶ್ರೀಲಂಕಾದ ಎಂಟು ಕಡೆ ಸರಣಿ ಸ್ಫೋಟ ನಡೆದು 300ಕ್ಕೂ ಅಧಿಕ ಜನ ಬಲಿತೆಗೆದುಕೊಂಡ ಬಳಿಕ ಉದ್ಭವಿಸಿದ ಭದ್ರತಾ ಬೆದರಿಕೆಗಳ ಕಾರಣಕ್ಕೆ ಕೇಂದ್ರ ಸರ್ಕಾರ ಈ ಸಲಹೆ ನೀಡಿದೆ.

ಏಪ್ರಿಲ್​ 21ರ ಸರಣಿ ಬಾಂಬ್​ ಸ್ಫೋಟಗಳ ಶ್ರೀಲಂಕಾದಲ್ಲಿ ಪ್ರಸ್ತುತ ಉಂಟಾಗಿರುವ ಭದ್ರತಾ ಅಪಾಯದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಅನಗತ್ಯವಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳದಿರುವುದು ಒಳಿತು ಎಂದು ಪ್ರಕಟಣೆ ತಿಳಿಸಿದೆ.

ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಪ್ರವಾಸ ಸಲಹೆಯಲ್ಲಿ ತುರ್ತು ಪ್ರವಾಸ ಕೈಗೊಳ್ಳಲೇಬೇಕಾದ ಸಂದರ್ಭಗಳಲ್ಲಿ ಕೊಂಲಬೋ, ಕ್ಯಾಂಡಿ, ಹಂಬಂಟೋಟಾ ಹಾಗೂ ಜಾಫ್ನಾದಲ್ಲಿರುವ ಭಾರತೀಯ ಹೈಕಮಿಷನ್​ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಭಾರತೀಯ ಹೈಕಮಿಷನ್ ದೂರವಾಣಿ ಸಂಖ್ಯೆಗಳು ವೆಬ್​ಸೈಟ್​ನಲ್ಲಿ ಲಭ್ಯವಿದೆ ಎಂದು ಹೇಳೀದೆ.

For All Latest Updates

TAGGED:

ABOUT THE AUTHOR

...view details