ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು (The United Nations Population Fund -UNFPA) 2020ನೇ ಸಾಲಿನ ವಿಶ್ವ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿದೆ. ಭಾರತಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಭಾರತದಲ್ಲಿ ಪ್ರತಿವರ್ಷ ಸುಮಾರು 4.5 ಲಕ್ಷದಷ್ಟು ಹೆಣ್ಣುಮಕ್ಕಳು ಹುಟ್ಟುತ್ತಲೇ ಕಳೆದುಹೋಗುತ್ತಾರೆ ಅಥವಾ ಲೆಕ್ಕಕ್ಕೇ ಸಿಗಲ್ಲ ಎಂದು ವರದಿಯಲ್ಲಿ ಹೇಳಲಾಗಿರುವುದು ಆತಂಕಕಾರಿ ವಿಷಯವಾಗಿದೆ.
ಕಳೆದ 50 ವರ್ಷಗಳಲ್ಲಿ ವಿಶ್ವದಲ್ಲಿ ಕಳೆದು ಹೋದ ಹೆಣ್ಣುಮಕ್ಕಳ ಸಂಖ್ಯೆ 142.6 ರಷ್ಟಿದ್ದು ಇದರಲ್ಲಿ ಭಾರತದಲ್ಲಿಯೇ 45.8 ಮಿಲಿಯನ್ ಹೆಣ್ಣುಮಕ್ಕಳು ಕಳೆದುಹೋಗಿದ್ದಾರೆ. ಪ್ರತಿವರ್ಷ ವಿಶ್ವದಲ್ಲಿ ಕಳೆದುಹೋಗುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಚೀನಾ ಹಾಗೂ ಭಾರತದ ಪಾಲು ಶೇ 90 ರಷ್ಟಿದೆ. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಹಾಗೂ ಹುಟ್ಟುವ ಮಗು ಗಂಡೇ ಆಗಿರಬೇಕೆಂಬ ಭಾರತೀಯರ ಕೆಟ್ಟ ಮನೋಭಾವನೆಯಿಂದ ಅದೆಷ್ಟೋ ಹೆಣ್ಣು ಜೀವಗಳು ಹುಟ್ಟುವ ಮೊದಲೇ ಬಾಡಿ ಹೋಗುತ್ತಿವೆ.
ಕಳೆದು ಹೋದ ಹೆಣ್ಣುಮಕ್ಕಳು, ಹೆಣ್ಣುಮಕ್ಕಳ ಹೆಚ್ಚುವರಿ ಸಾವು ಹಾಗೂ ಹುಟ್ಟುತ್ತಲೇ ಕಣ್ಮರೆಯಾಗುವ ಹೆಣ್ಣುಮಕ್ಕಳ ಅಂಕಿ ಸಂಖ್ಯೆ (ಮಿಲಿಯನ್ಗಳಲ್ಲಿ)
ವಿಶ್ವ | ಭಾರತ | |
ಕಳೆದುಹೋದ ಹೆಣ್ಣುಮಕ್ಕಳು | 142.6 | 45.8 |
ಹೆಣ್ಣುಮಕ್ಕಳ ಹೆಚ್ಚುವರಿ ಸಾವು | 1.71 | 0.36 |
ಹುಟ್ಟುತ್ತಲೇ ಕಣ್ಮರೆಯಾದ ಹೆಣ್ಣು ಮಕ್ಕಳು | 1.5 | 0.59 |