ಕರ್ನಾಟಕ

karnataka

ETV Bharat / bharat

ಕೋವಿಡ್ 19 ವಿರುದ್ಧ ಸ್ವತಂತ್ರ ತನಿಖೆ: ಜಾಗತಿಕ ನಿರ್ಣಯಕ್ಕೆ ಭಾರತದ ಬೆಂಬಲ - ಕೋವಿಡ್ 19 ವಿರುದ್ಧ ಸ್ವತಂತ್ರ ತನಿಖೆ

ಆಸ್ಟ್ರೇಲಿಯಾ ಹಾಗೂ ಐರೋಪ್ಯ ರಾಷ್ಟ್ರಗಳು ಒಂದು ರೀತಿಯ ಹೊಣೆಗಾರಿಕೆಯನ್ನು ನಿರ್ಧರಿಸಲು ಹಾಗೂ ಈ ಸಾಂಕ್ರಾಮಿಕ ರೋಗದಿಂದ ವಿಶ್ವ ಸಮುದಾಯ ಕಲಿತ ಪಾಠಗಳನ್ನು ಅರಿಯಲು ಕೋವಿಡ್​​-19 ವಿರುದ್ಧ ಸ್ವತಂತ್ರ ತನಿಖೆಗೆ ಸಜ್ಜಾಗಿರುವ ಜಾಗತಿಕ ರಾಷ್ಟ್ರಗಳ ನಿರ್ಣಯಕ್ಕೆ ಭಾರತವೂ ಬೆಂಬಲ ವ್ಯಕ್ತಪಡಿಸಿದೆ.

Independent investigation against covid19
ಕೋವಿಡ್ 19 ವಿರುದ್ಧ ಸ್ವತಂತ್ರ ತನಿಖೆ

By

Published : May 18, 2020, 5:38 PM IST

ಹೈದರಾಬಾದ್:ಕೊರೊನಾ ವೈರಸ್‍ನ ತವರು ವುಹಾನ್ ಅಥವಾ ಚೀನಾ ದೇಶದ ಹೆಸರು ಪ್ರಸ್ತಾಪಿಸದೆ, 62 ದೇಶಗಳು, ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ಸ್ವತಂತ್ರ ತನಿಖೆಯ ನಿರ್ಣಯ ಮಂಡಿಸಿವೆ.

ಈ ನಿರ್ಣಯವನ್ನು ಆಸ್ಟ್ರೇಲಿಯಾ ಹಾಗೂ ಐರೋಪ್ಯ ಒಕ್ಕೂಟ ಜಂಟಿಯಾಗಿ ಮಂಡಿಸಿವೆ. ಸೋಮವಾರ ಜಿನೇವಾದಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹತ್ವದ ಸಭೆಯ ಮುನ್ನ ಈ ನಿರ್ಣಯ ಮಂಡಿಸಲಾಗಿದೆ. ಆದರೆ ಈ ನಿರ್ಣಯದಲ್ಲಿ ತನಿಖೆ ಅಥವಾ ವಿಚಾರಣೆ ಎಂಬ ಪದಗಳ ಬದಲಿಗೆ ಅತ್ಯಂತ ಜಾಗರೂಕವಾಗಿ ಈ ಸಾಂಕ್ರಾಮಿಕ ರೋಗದ ಮೌಲ್ಯಮಾಪನ ಎಂಬ ಶಬ್ದವನ್ನು ಈ ನಿರ್ಣಯದಲ್ಲಿ ಬಳಸಲಾಗಿದೆ.

ಈ ನಿರ್ಣಯ ಬೆಂಬಲಿಸಿರುವ 62 ದೇಶಗಳ ಪೈಕಿ ಭಾರತ ಕೂಡಾ ಒಂದು. ಅಲ್ಬೇನಿಯಾ, ಬಾಂಗ್ಲಾದೇಶ, ಬೆಲಾರಸ್, ಭೂತಾನ್,ಬ್ರೆಝಿಲ್, ಕೆನಾಡ, ಇಂಡೋನೇಷ್ಯಾ, ಜಪಾನ್, ನ್ಯೂಜಿಲ್ಯಾಂಡ್, ನಾರ್ವೆ, ದಕ್ಷಿಣ ಕೊರಿಯಾ, ರಷ್ಯಾ, ತುರ್ಕಿ, ಬ್ರಿಟನ್ ಈ ನಿರ್ಣಯ ಬೆಂಬಲಿಸಿರುವ ದೇಶಗಳ ಪೈಕಿ ಪ್ರಮುಖವಾದುವು. ಆಶ್ಚರ್ಯವೆಂದರೆ, ಅಮೆರಿಕಾ ಸಂಯುಕ್ತ ಸಂಸ್ಥಾನ, ಈವರೆಗೆ, ಈನಿರ್ಣಯ ಬೆಂಬಲಿಸುವ ಬಗ್ಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ.

ಉಳಿದಂತೆ, ನಿರೀಕ್ಷೆಯಂತೆ ಚೀನಾ ಈ ನಿರ್ಣಯ ಬೆಂಬಲಿಸುತ್ತಿಲ್ಲ. ಈ ನಿರ್ಣಯದ ಕರಡು ಪ್ರತಿ ಪ್ರಕಾರ, ಉಳಿದ ವಿಷಯಗಳ ಜೊತೆಗೆ ಅತಿ ಶೀಘ್ರದಲ್ಲಿ ಹಾಗೂ ಅತ್ಯಂತ ಸೂಕ್ತ ಸಮಯದಲ್ಲಿ, ಸದಸ್ಯ ರಾಷ್ಟ್ರಗಳ ಜೊತೆಗೆ ಚರ್ಚಿಸಿದ ಬಳಿಕ, ತಾರತಮ್ಯವಿಲ್ಲದ, ಸ್ವತಂತ್ರ, ಹಾಗೂ ಸಂಪೂರ್ಣ ಮೌಲ್ಯಮಾಪನವನ್ನು ಸದ್ಯಕ್ಕೆ ಲಭ್ಯವಿರುವ ಸಾಧನಗಳ ಮೂಲಕ, ವಿಶ್ವ ಆರೋಗ್ಯ ಸಂಸ್ಥೆಯ ಸಮನ್ವಯತೆಯೊಂದಿಗೆ ಕೋವಿಡ್19ಕ್ಕೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ಪಡೆದ ಅನುಭವ ಹಾಗೂ ಕಲಿತ ಪಾಠಗಳನ್ನು ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಬಳಿ ಲಭ್ಯವಿದ್ದ ಸಾಧನಗಳ ಪರಿಣಾಮಕಾರಿತ್ವದ ಅಧ್ಯಯವನ್ನು ಕೂಡಾ ನಿರ್ಣಯದಲ್ಲಿ ಸೇರಿಸಲಾಗಿದೆ.

ಈ ನಿರ್ಣಯದ ಚೀನಾ ಕೋವಿಡ್ 19ರ ತವರು ಎಂದು ದೋಷಾರೋಪ ಮಾಡುತ್ತಿಲ್ಲ. ಆದರೆ ಇದು, ವಿಶ್ವ ಆರೋಗ್ಯ ಸಂಸ್ಥೆ ಪ್ರಾಣಿಗಳ ಆರೋಗ್ಯದ ವಿಶ್ವ ಸಂಸ್ಥೆಯ ಜೊತೆಗೆ ಕೆಲಸಮಾಡಬೇಕಿದೆ ಹಾಗೂ ವೈಜ್ಞಾನಿಕ ಹಾಗೂ ಜಂಟಿ ಕ್ಷೇತ್ರ `ಕಾರ್ಯದ ಮೂಲಕ, ಈ ಕೊರೊನಾ ವೈರಸ್‍ನ ಪ್ರಾಣಿಮೂಲವನ್ನು ಕಂಡು ಹಿಡಿದು, ಅದು ಮಾನವ ಜನಂಖ್ಯೆಗೆ ವರ್ಗಾವಣೆಗೊಂಡ ರೀತಿ ಹಾಗೂ ಅದರ ಮಧ್ಯವರ್ತಿ ವಸ್ತುಗಳ ಪತ್ತೆ ಮಾಡಬೇಕು ಎಂದು ಸೂಚಿಸಿದೆ.

ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಸಚಿವ ಈ ಸಂಬಂಧ ನೀಡಿರುವ ಹೇಳಿಕೆಯಲ್ಲಿ, ಈ ಸಾಂಕ್ರಾಮಿಕ ರೋಗದ ಬಗ್ಗೆ ಸ್ವತಂತ್ರ ವಿಮರ್ಶೆಗೆ ಧನಾತ್ಮಕ ಬೆಂಬಲ ವ್ಯಕ್ತವಾಗಿದೆ. "ವಿಶ್ವ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಹಾಯ ಮಾಡಲು ಈ ವಿಮರ್ಶೆ ಅಗತ್ಯವಾಗಿದೆ,"ಎಂದು ಅವರು ತಿಳಿಸಿದ್ದಾರೆ. "ಮುಂದಿನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ಅದು ಹರಡದಂತೆ ತಡೆಗಟ್ಟಲು ಹಾಗೂ ಆಮೂಲಕ, ಪ್ರಜೆಗಳನ್ನು ರಕ್ಷಿಸಲು ವಿಶ್ವ ಸಮುದಾಯವನ್ನು ಸಜ್ಜುಗೊಳಿಸಲು ಇದೊಂದು ಜಾಗತಿಕ ಸಹಯೋಗ," ಎಂದು ಅವರು ತಿಳಿಸಿದರು.

ಆಸ್ಟ್ರೇಲಿಯಾ ಹಾಗೂ ಐರೋಪ್ಯ ರಾಷ್ಟ್ರಗಳು ಒಂದು ರೀತಿಯ ಹೊಣೆಗಾರಿಕೆಯನ್ನು ನಿರ್ಧರಿಸಲು ಹಾಗೂ ಈ ಸಾಂಕ್ರಾಮಿಕ ರೋಗದಿಂದ ವಿಶ್ವ ಸಮುದಾಯ ಕಲಿತ ಪಾಠಗಳನ್ನು ಅರಿಯಲು ಈ ನಿರ್ಣಯವನ್ನು ಮಂಡಿಸಿವೆ. ಆದರೆ, ಚೀನಾ ಇದರ ವಿರುದ್ಧ ನಿರ್ಧಾರ ತಳೆಯುವುದಾಗಿ ಈಗಾಗಲೇ ಘೋಷಿಸಿದೆ. ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‍ಬೆರಾದಲ್ಲಿರುವ ಚೀನಾ ದೇಶದ ರಾಯಭಾರಿ, ಈ ನಿರ್ಣಯದ ವಿರುದ್ಧ ತಮ್ಮ ನಿರ್ಧಾರವನ್ನು ಇನ್ನಷ್ಟು ಕಠಿಣಗೊಳಿಸಿದ್ದು, ಒಂದು ವೇಳೆ ಆಸ್ಟ್ರೇಲಿಯಾ ಈ ನಿರ್ಣಯದ ಪರ ನಿಂತಿದ್ದೇ ಆದರೆ ಅದರ ವಾಣಿಜ್ಯ ಪರಿಣಾಮಗಳನ್ನು ದೇಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆಸ್ಟ್ರೇಲಿಯಾ ತನ್ನ ನಿರ್ಣಯ ಹಿಂತೆಗೆದುಕೊಳ್ಳದಿದ್ದರೆ, ದೇಶದಿಂದ ಬೀಫ್ ಹಾಗೂ ವೈನ್ ಆಮದನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

"ಇದು ಯಾವುದೇ ಒಂದು ದೇಶ ಅಥವಾ ಸಂಸ್ಥೆಯ ವಿರುದ್ಧವಲ್ಲ. ಇದು ಪರಸ್ಪರ ಟೀಕೆಯ ಸಮಯವಲ್ಲ. ಇದು ಮುಕ್ತತೆ ಹಾಗೂ ಪಾರದರ್ಶಕತೆಗಾಗಿನ ಸಮಯ. ಏಕೆಂದರೆ ಮುಂದೆ ವಿಶ್ವ ಇಂತಹ ಸವಾಲನ್ನು ಎದುರಿಸಿದಾಗ, ನಾವು ಅದನ್ನು ಇನ್ನಷ್ಟು ಸಮರ್ಥವಾಗಿ ಎದುರಿಸಬಹುದು," ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಈ ಹಿಂದೆ ಈ ವರದಿಗಾರರಿಗೆ ತಿಳಿಸಿದ್ದರು. ಅವರು ಜಾಗತಿಕ ಮಟ್ಟದ, ಬಹುಪಕ್ಷೀಯ, ಸಾಂಸ್ಥಿಕ ನೆಲೆಗಟ್ಟಿನಲ್ಲಿ, ಇಂತಹ ಪ್ರಯತ್ನಕ್ಕೆ ಬೆಂಬಲ ನೀಡಿದ್ದರು. ಏಕೆಂದರೆ ಕೆಲವೇ ದೇಶಗಳು ಏಕಪಕ್ಷೀಯವಾಗಿ ಉದಾಹರಣೆಗೆ ಅಮೆರಿಕಾ ತನಿಖೆ ಕೈಗೊಂಡರೆ, ಅದು ರಾಜಕೀಯ ಬೆಂಬಲಕ್ಕಾಗಿನ ಪ್ರಯತ್ನ ಎಂಬ ಆರೋಪಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಕಳೆದ ವಾರ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವಯಿಡೊಂಗ್ ಅವರು ತಮ್ಮ ಟ್ವಿಟ್ಟರ್​​​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ, #ಲಾನ್ಸೆಟ್ ಹಾಗೂ ಹಲವರು ದೇಶಗಳ ತಜ್ಞರು ಕೊರೊನಾ ವೈರಸ್ ವುಹಾನ್‍ನ ಪ್ರಯೋಗಾಲದಲ್ಲಿ ಸೃಷ್ಟಿಯಾದುದಲ್ಲ ಅಥವಾ ಸೋರಿಕೆಯಾದುದಲ್ಲ." ಎಂದು ತಿಳಿಸಿದ್ದಾರೆ. "ವಿಶ್ವದ ಎಲ್ಲಾ ದೇಶಗಳ ಭವಿಷ್ಯ ಪರಸ್ಪರ ಹತ್ತಿರದ ಸಂಬಂಧ ಹೊಂದಿವೆ. ಪರಸ್ಪರ ದೋಷಾರೋಪಣೆಯಿಂದ ನಮ್ಮ ಅತ್ಯಮೂಲ್ಯ ಸಮಯ ವ್ಯರ್ಥವಾಗುತ್ತದೆಯೇ ವಿನಃ ಏನೂ ಲಾಭವಿಲ್ಲ," ಎಂದು ಅವರು ತಮ್ಮ ಟ್ವೀಟ್​​​ನಲ್ಲಿ ತಿಳಿಸಿದ್ದಾರೆ. ಈ ನಡುವೆ, ಆಸ್ಟ್ರೇಲಿಯಾ, ವಿಶ್ವ ಆರೋಗ್ಯ ಸಂಸ್ಥೆಯ ವೀಕ್ಷಕನಾಗಿ ತೈವಾನ್ ಹಿಂತಿರುಗಬೇಕು ಎಂದು ಆಗ್ರಹಿಸಿದೆ. ಇದಕ್ಕೆ ಒಂದು ರಾಷ್ಟ್ರ ನೀತಿಯಡಿಯಲ್ಲಿ ಚೀನಾ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. #ಕೋವಿಡ್19, ಸತ್ಯವನ್ನು ನೀವು ಅರಿಯಬೇಕಿದೆ.

ಚೀನಾದ ಭಾಗವಾಗಿ #ತೈವಾನ್ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರವಾಗಲು ಸಾಧ್ಯವಿಲ್ಲ. ಏಕೆಂದರೆ, ಸ್ವತಂತ್ರ ದೇಶಕ್ಕೆ ಮಾತ್ರ ಸದಸ್ಯತ್ವ ದೊರಕಲಿದೆ. ಚೀನಾದ ಭಾಗವಾಗಿ ತೈವಾನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ನಡುವಣ ಸಂಬಂಧದ ನಡುವೆ ಯಾವುದೇ ಅಡಚಣೆಯಿಲ್ಲ ಎಂದು ಚೀನಾದ ಭಾರತದ ರಾಯಭಾರಿ ಕಚೇರಿಯ ಜಿ ರೋಂಗ್ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪದವಿ ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಸಿಗುವ ಸಾಧ್ಯತೆಯಿದೆ.

ABOUT THE AUTHOR

...view details