ಕರ್ನಾಟಕ

karnataka

ETV Bharat / bharat

ಕೈಯಲ್ಲಿ ಕಾಸಿಲ್ಲದಿದ್ದರೂ ಸಂಸದನಾಗುವ ಕನಸು.. ಹಣಕ್ಕಾಗಿ ಕಿಡ್ನಿ ಮಾರಲು ಮುಂದಾದ ಯುವಕ.. - ಹಣಕ್ಕಾಗಿ ಕಿಡ್ನಿ

ಆಸ್ಸೋಂನ ಮೊಡತಿ ಗ್ರಾಮದ 26 ವರ್ಷದ ಸುಕರ್​ ಅಲಿ ಪಕ್ಷೇತರ ಅಭ್ಯರ್ಥಿಯಾಗಿ ಧ್ರುಬಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸುಕರ್​ ಅಲಿ

By

Published : Apr 6, 2019, 7:27 PM IST

ಗುವಾಹಟಿ(ಆಸ್ಸೋಂ): ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ವಿವಿಧ ರಾಜಕೀಯ ಮುಖಂಡರು ಸೇರಿ ಅನೇಕರು ಮುಂದಾಗಿದ್ದಾರೆ. ಇದರ ಮಧ್ಯೆ ಬಡ ರೈತನೋರ್ವ ತನ್ನರಾಜಕೀಯದಲ್ಲಿ ಭವಿಷ್ಯ ಕಲ್ಪಿಸುವ ಗುರಿ ಇರಿಸಿಕೊಂಡಿದ್ದಾನೆ. ಆದರೆ, ಪ್ರಚಾರಕ್ಕಾಗಿ ಹಣ ಕೂಡಿಸಲು ತನ್ನ ಕಿಡ್ನಿಯನ್ನೇ ಮಾರಲು ಮುಂದಾಗಿದ್ದಾನೆ.

ಆಸ್ಸೋಂನ ಮೊಡತಿ ಗ್ರಾಮದ 26 ವರ್ಷದ ಸುಕರ್​ ಅಲಿ ಪಕ್ಷೇತರ ಅಭ್ಯರ್ಥಿಯಾಗಿ ಧ್ರುಬಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈಗಾಗಲೇ ಪ್ರಚಾರ ನಡೆಸಲು ಹಣ ಸಂಗ್ರಹ ಮಾಡುತ್ತಿರುವ ಇವರು ಅವಶ್ಯಕತೆ ಬಿದ್ದರೆ ತನ್ನ ಕಿಡ್ನಿ ಮಾರಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾನೆ.

ಜನರಿಗಾಗಿ ಕೆಲಸ ಮಾಡುತ್ತಿರುವ ಈತ, ಐದು ವರ್ಷದ ಹಿಂದೆ ಬ್ರಿಡ್ಜ್​ ನಿರ್ಮಾಣ ಮಾಡಲು ತನ್ನ ಸ್ವಂತ ಜಮೀನಿನಲ್ಲಿ ಸ್ವಲ್ಪ ಭಾಗವನ್ನ ಮಾರಾಟ ಮಾಡಿದ್ದ. ಈಗ ನಿರುದ್ಯೋಗಿಯಾಗಿರುವ ಈತ ಚುನಾವಣಾ ಅಖಾಡಕ್ಕಿಳಿದಿದ್ದಾನೆ.ಈ ಬಗ್ಗೆ ಮಾತನಾಡಿರುವ ಸುಕರ್​, ನಾನು ಚಿಕ್ಕವನಿಂದಾಗಿನಿಂದಲೂ ರಾಜಕೀಯಕ್ಕೆ ಬರಬೇಕೆಂಬ ಆಸೆ ಕಂಡಿರುವೆ. ರಾಜಕೀಯದಲ್ಲಿರುವ ಯಾವೊಬ್ಬ ವ್ಯಕ್ತಿ ಕೂಡ ಬಡವರಿಗೆ ಸಹಾಯ ಮಾಡುತ್ತಿಲ್ಲ. ಆ ಸಂಸ್ಕೃತಿಗೆ ಬ್ರೇಕ್​ ಹಾಕಿ ಬಡವರ ಉದ್ಧಾರಕ್ಕಾಗಿ ದುಡಿಯಬೇಕೆಂಬ ನಿರ್ಧಾರ ಮಾಡಿರುವೆ ಎಂದಿದ್ದಾನೆ.

ನನ್ನ ಕ್ಷೇತ್ರದ ಜನರು ನೀರಿನ ಸಮಸ್ಯೆ ಸೇರಿದಂತೆ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವೇಳೆ ನಾನು ಚುನಾಯಿತನಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ಕಲ್ಪಿಸೋದಾಗಿ ಹೇಳಿಕೊಂಡಿದ್ದಾನೆ. ಆಸ್ಸೋಂನಲ್ಲಿ ಏಪ್ರಿಲ್​ 11,18 ಹಾಗೂ 23ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬಿಳಲಿದೆ.

ABOUT THE AUTHOR

...view details