ನವದೆಹಲಿ: ನಾಳೆ ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವವನ್ನ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಇಡೀ ದೇಶದ ಜನರೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ತುದಿಗಾಲಿನ ಮೇಲೆ ನಿಂತಿದ್ದಾರೆ.
ಭಾರತ ಮಾತ್ರವಲ್ಲ, ಈ ದೇಶಗಳಲ್ಲೂ ನಾಳೆಯೇ ಸ್ವತಂತ್ರ ದಿನ! - ಕೊರಿಯಾ
ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ನಾಳೆಯೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈ ದೇಶದ ಜನರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ತುದಿಗಾಲಿನ ಮೇಲೆ ನಿಂತಿದ್ದಾರೆ.

ಆಗಸ್ಟ್ 15, 1947ರಲ್ಲಿ ಬ್ರಿಟಿಷರಿಂದ ಮುಕ್ತಗೊಂಡ ಬಳಿಕ ಪ್ರತಿ ವರ್ಷವೂ ಈ ದಿನವನ್ನ ಸ್ವತಂತ್ರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ನಾಳೆ ದೇಶದ ಎಲ್ಲಡೆ ಈ ದಿನವನ್ನ ಸಡಗರ ಸಂಭ್ರಮದಿಂದ ಆಚರಣೆ ಮಾಡಲು ಈಗಾಗಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ವಿಶೇಷವೆಂದರೆ ಭಾರತದ ಸ್ವಾತಂತ್ರ್ಯೋತ್ಸವದ ದಿನವೇ ಇನ್ನು ನಾಲ್ಕು ರಾಷ್ಟ್ರಗಳು ತಮ್ಮ ದೇಶದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿವೆ.
ಕಾಂಗೋ, ಕೊರಿಯಾ, ಬಹ್ರೇನ್, ಮತ್ತು ಲಿಸ್ಟೆನ್ಸ್ಟೈನ್ ದೇಶಗಳು ಸಹ ನಾಳೆ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಲಿವೆ. ಕೊರಿಯಾದ ರಾಷ್ಟ್ರೀಯ ವಿಮೋಚನಾ ದಿನ ನಾಳೆ ಅಚರಣೆ ಮಾಡಲಾಗುತ್ತಿದ್ದು, ಈ ದಿನ ಉತ್ತರ ಮತ್ತು ದಕ್ಷಿಣ ಕೊರಿಯಾ ಈ ಸಂಭ್ರಮದಲ್ಲಿ ಭಾಗಿಯಾಗಲಿವೆ. ಅಮೆರಿಕ ಹಾಗೂ ಸೊವಿಯತ್ ಒಕ್ಕೂಟದ ಹಿಡಿತದಲ್ಲಿದ್ದ ಕೊರಿಯಾ ಉತ್ತರ ಹಾಗೂ ದಕ್ಷಿಣ ಕೊರಿಯಾ ಆಗಿ ಸ್ವತಂತ್ರವಾಗಿದ್ದು ಆಗಸ್ಟ್ 15ರಂದು ಎಂಬುದು ವಿಶೇಷ.
ಬಹ್ರೇನ್ ಬ್ರಿಟಿಷ್ ಆಡಳಿತದಿಂದ, ಕಾಂಗೋ 1960ರಲ್ಲಿ ಫ್ರಾನ್ಸ್ನಿಂದ ಹಾಗೂ ಲಿಸ್ಟೆನ್ಸ್ಟೈನ್ ಜರ್ಮನ್ನಿಂದ ಆಗಸ್ಟ್ 15ರಂದೇ ಸ್ವತಂತ್ರ ಪಡೆದುಕೊಂಡಿರುವುದು ವಿಶೇಷವಾಗಿದೆ.