ಪಾಟ್ನಾ:ಪಾಟ್ನಾದ ಸದಕತ್ ಆಶ್ರಮದ ಬಳಿ ಇರುವಕಾಂಗ್ರೆಸ್ ಪ್ರಧಾನ ಕಚೇರಿಯ ಬಳಿ8 ಲಕ್ಷ ರೂ. ದೊರೆತ ಬಳಿಕ, ಪ್ರಧಾನ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರು.
ವಶ ಪಡಿಸಿಕೊಂಡ ಹಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರರಾದ ಶಕ್ತಿ ಸಿಂಗ್ ಗೋಹಿಲ್ ಮತ್ತು ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಆದಾಯ ತೆರಿಗೆ ತಂಡಗಳು ಕಾಂಗ್ರೆಸ್ ಕಚೇರಿಗಳಲ್ಲಿ ದಿನವಿಡೀ ಗಂಟೆಗಳ ಕಾಲ ಶೋಧ ಹಾಗೂ ತನಿಖೆ ನಡೆಸಿತು. ಬಳಿಕ ಕಾಂಗ್ರೆಸ್ ಪ್ರಧಾನ ಕಚೇರಿಯ ಗೋಡೆಗೆ ನೋಟಿಸ್ ಅಂಟಿಸಿದೆ.
ಕಾಂಗ್ರೆಸ್ ಉಸ್ತುವಾರಿ ಶಕ್ತಿ ಸಿಂಗ್ ಗೋಹಿಲ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಸಹೋದರ ಮನೆಯಿಂದ ಕೆ.ಜಿ. ಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡಾಗ ಯಾವುದೇ ಸಂಸ್ಥೆ ಈ ಬಗ್ಗೆ ಕೇಳುವುದಿಲ್ಲ. ಕಾಂಪೌಂಡ್ ಹೊರಗೆ ನಿಂತಿದ್ದ ಕಾರಿನಿಂದ ವಶಪಡಿಸಿಕೊಂಡ ಹಣದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದರು.
ಮಹಾ ಮೈತ್ರಿಯ ಬಗ್ಗೆ ಬಿಜೆಪಿ ಮತ್ತು ಜೆಡಿಯು ಆತಂಕಗೊಂಡಿದ್ದು, ಆದ್ದರಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ನಾವು ಅದರ ಬಗ್ಗೆ ಹೆದರುವುದಿಲ್ಲ. ಅಧಿಕಾರಿಗಳಿಗೆ ನಾವು ಸಹಕರಿಸುತ್ತೇವೆ ಎಂದು ಹೇಳಿದರು.