ಕರ್ನಾಟಕ

karnataka

ETV Bharat / bharat

ಕೊರೊನಾ ಚಿಕಿತ್ಸೆಗೂ  ಆರೋಗ್ಯ ವಿಮೆಯಲ್ಲೇ ವೆಚ್ಚ ಬರಿಸುವಂತೆ ವಿಮಾ ಕಂಪನಿಗಳಿಗೆ ಐಆರ್​​ಡಿಎ ಆದೇಶ - ವಿಮಾ ಕಂಪನಿಗಳಿಗೆ ನಿರ್ದೇಶಿಸಿದ ಐಆರ್​​ಡಿಎ

ಎಲ್ಲ ಆರೋಗ್ಯ ವಿಮಾ ಕಂಪನಿಗಳು ತಮ್ಮ ಪಾಲಿಸಿಯಲ್ಲಿ COVID-19ನನ್ನು ಸೇರಿಸಿಕೊಳ್ಳಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದೆ.

Include medical cover for COVID-19
ಕಂಪನಿಗಳಿಗೆ ನಿರ್ದೇಶಿಸಿದ ಐಆರ್​​ಡಿಎ

By

Published : Mar 12, 2020, 4:58 AM IST

Updated : Mar 12, 2020, 6:33 AM IST

ಹೈದರಾಬಾದ್: ಆರೋಗ್ಯ ವಿಮಾ ಕಂಪನಿಗಳು ತಮ್ಮ ಪಾಲಿಸಿಗಳಲ್ಲಿ COVID-19ನನ್ನು ಸೇರಿಸಿಕೊಳ್ಳಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್​​ಡಿಎ) ನಿರ್ದೇಶಿಸಿದೆ.

ಕೊರೊನಾ ವೈರಸ್ ಸೋಂಕಿತರು ಅನುಭವಿಸುವ ತೊಂದರೆಗಳನ್ನು ನಿವಾರಿಸುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಕೊರೊನಾ ವೈರಸ್​ಗೆ ಪಾಲಿಸಿದಾರರು ತುತ್ತಾದರೆ ಈ ಕೆಳಗಿನ ಮಾನದಂಡಗಳ ಪ್ರಕಾರ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.

i) ಕೊರೊನಾ ವೈರಸ್​ ಇದೆ ಎಂದು ಖಚಿತವಾದ ತಕ್ಷಣ ಪಾಲಿಸಿದಾರರು ವಿಮೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ii) ಈ ವೇಳೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸಲಿದ್ದು. ಅದನ್ನು ಕೆಲವು ನಿಯಮ ಮತ್ತು ಷರತ್ತುಗಳ ಚೌಕಟ್ಟಿನಲ್ಲಿ ನೀಡಲಾಗುವುದು.

iii) COVID19 ರ ಅಡಿಯಲ್ಲಿ ಬಂದಂತಹ ಎಲ್ಲ ಪಾಲಿಸಿದಾರರ ಅರ್ಜಿಗಳನ್ನು ತಿರಸ್ಕರಿಸುವ ಮೊದಲು, ಹಕ್ಕುಗಳ ಪರಿಶೀಲನಾ ಸಮಿತಿ ಸಂಪೂರ್ಣವಾಗಿ ಅರ್ಜಿಗಳನ್ನು ಪರಿಶೀಲಿಸುತ್ತದೆ.

2. ಅಗತ್ಯವಿದ್ದಾಗ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುವ ಸಲುವಾಗಿ, ನಿರ್ದಿಷ್ಟ ಕಾಯಿಲೆಗಳಿಗೆ ವಿಮೆಯನ್ನು ಪರಿಚಯಿಸುತ್ತಿದ್ದಾರೆ. ವಿವಿಧ ವಿಭಾಗಗಳ ಆರೋಗ್ಯ ವಿಮೆಯ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶಕ್ಕಾಗಿ, ಕೊರೊನಾ ವೈರಸ್‌ನ ಚಿಕಿತ್ಸೆಯ ವೆಚ್ಚವನ್ನು ಬರಿಸಲು ಹೊಸ ನೀತಿಗಳನ್ನು ತಯಾರಿಸಲು ಐಆರ್​​ಡಿಎ ವಿಮಾ ಕಂಪನಿಗಳಿಗೆ ಸೂಚಿಸಿದೆ.

3. ಐಆರ್​​ಡಿಎ ಕಾಯ್ದೆ 1999 ರ ಸೆಕ್ಷನ್ 14 (2) (ಇ) ನ ನಿಬಂಧನೆಗಳ ಅಡಿಯಲ್ಲಿ ಪಾಲಿಸಿದಾರರಿಗೆ ವಿಮೆಯನ್ನು ನೀಡಲಾಗುತ್ತದೆ.

ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಕೊರೊನಾಗೆ ವಿಮೆ ಸೌಲಭ್ಯ ನೀಡಿದ ಮೊದಲ ರಾಷ್ಟ್ರ ಭಾರತವಾಗಲಿದೆ. ಈಗಾಗಲೆ ಮಾರಣಾಂತಿಕ ಕೊರೊನಾಕ್ಕೆ ವಿಶ್ವದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದರೆ, 90 ಸಾವಿರಕ್ಕೂ ಹೆಚ್ಚು ಜನರು ಇದರ ಸೋಕಿಗೆ ತುತ್ತಾಗಿದ್ದಾರೆ. ಭಾರತದಲ್ಲೂ ಕೂಡ 69 ಮಂದಿಗೆ ಸೋಕು ತಗುಲಿದೆ.

Last Updated : Mar 12, 2020, 6:33 AM IST

ABOUT THE AUTHOR

...view details