ಕರ್ನಾಟಕ

karnataka

ETV Bharat / bharat

ಸಾಂಸ್ಥಿಕ ಕ್ವಾರಂಟೈನ್​ಗೆ ಉತ್ತೇಜನ: ಒಡಿಶಾ ಸರ್ಕಾರದಿಂದ 2 ಸಾವಿರ ರೂ. ಪ್ರೋತ್ಸಾಹಧನ - ಒಡಿಶಾ ಸರ್ಕಾರದಿಂದ 2 ಸಾವಿರ ಪ್ರೋತ್ಸಾಹ ಧನ

ಸಾಂಸ್ಥಿಕ ಕ್ವಾರಂಟೈನ್​ಗೆ ಜನರು ತಮ್ಮ ಹೆಸರು ನೋಂದಾಯಿಸುವುದನ್ನು ಪ್ರೋತ್ಸಾಹಿಸಲು ಕ್ವಾರಂಟೈನ್​ ಮುಗಿಸಿದ ಜನರಿಗೆ ಒಡಿಶಾ ರಾಜ್ಯ ಸರ್ಕಾರ 2,000 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ.

Incentive granted to people after completing quarantine period
ಸಾಂಸ್ಥಿಕ ಕ್ವಾರಂಟೈನ್​ಗೆ ಉತ್ತೇಜನ

By

Published : Jun 29, 2020, 9:33 PM IST

ಜಜ್​ಪುರ್:ಒಡಿಶಾ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಇತರ ರಾಜ್ಯಗಳಿಂದ ಬಂದು ಕ್ಯಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದವರಿಗೆ 2 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ತಾತ್ಕಾಲಿಕ ಕ್ವಾರಂಟೈನ್ ಕೇಂದ್ರಗಳು ಇವೆ ಎಂದು ಜಾಜ್‌ಪುರ ಜಿಲ್ಲಾಧಿಕಾರಿ ರಂಜನ್ ಕುಮಾರ್ ದಾಸ್ ಮಾಹಿತಿ ನೀಡಿದ್ದಾರೆ. ಒಡಿಶಾ ಸರ್ಕಾರವು ಹೊರಗಿನಿಂದ ಬರುವರನ್ನು ಸಾಂಸ್ಥಿಕ ಕ್ವಾರಂಟೈನ್ ಅಥವಾ ಹೋಂ ಕ್ಯಾರಂಟೈನ್‌ನಲ್ಲಿ ಇರಿಸಲಾಗುವುದು ಎಂದು ಆದೇಶ ಹೊರಡಿಸಿದೆ. ಸಾಂಸ್ಥಿಕ ಕ್ವಾರಂಟೈನ್​ಗೆ ಜನರು ತಮ್ಮ ಹೆಸರು ನೋಂದಾಯಿಸುವುದನ್ನು ಪ್ರೋತ್ಸಾಹಿಸಲು ಅವರಿಗೆ 2,000 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

'ನಾವು ಕ್ಯಾರಂಟೈನ್ ಕೇಂದ್ರಗಳಲ್ಲಿ ವಯಸ್ಕರಿಗೆ ದಿನಕ್ಕೆ 120 ಮತ್ತು ಮಕ್ಕಳಿಗೆ 100 ರೂಪಾಯಿ ಮೊತ್ತದ ಆಹಾರವನ್ನು ಉಚಿತವಾಗಿ ನೀಡುತ್ತಿದ್ದೇವೆ. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯು ತಾತ್ಕಾಲಿಕ ವೈದ್ಯಕೀಯ ಕೇಂದ್ರದ (ಟಿಎಂಸಿ) ಒಳಗೆ ತೋಟಗಾರಿಕೆ ಅಥವಾ ವರ್ಣಚಿತ್ರಗಳ ಕೆಲಸ ಮಾಡಲು ಬಯಸಿದರೆ ದಿನಕ್ಕೆ 150 ರೂಪಾಯಿಯಂತೆ ಗರಿಷ್ಠ 10 ದಿನಗಳವರೆಗೆ ಹಣ ಪಾವತಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

ABOUT THE AUTHOR

...view details