ಪಂಜಾಬ್:ನಗರದ ಮುಕ್ತಸರ್ ಸಾಹಿಬ್‌ನಲ್ಲಿ ಸಚಿವ ಟ್ರಿಪಟ್ ರಾಜಿಂದರ್ ಸಿಂಗ್ ಬಜ್ವಾ ಅವರು ಒಳಚರಂಡಿ( ಮ್ಯಾನ್ಹೋಲ್)ನನ್ನು ಸ್ವಚ್ಚಗೊಳಿಸುವ ಬ್ಯಾಂಡಿಕೂಟ್ ರೋಬೋಟ್ಗಳ ಯೋಜನೆಯನ್ನು ಉದ್ಘಾಟಿಸಿದರು.
ಮ್ಯಾನ್ ಹೋಲ್ ಸ್ವಚ್ಚಗೊಳಿಸುವ ಬ್ಯಾಂಡಿಕೂಟ್ ರೋಬೋಟ್ಗೆ ಸಚಿವ ಬಜ್ವಾ ಚಾಲನೆ ಈ ಬ್ಯಾಂಡಿಕೂಟ್ ರೋಬೋಟ್ ಮ್ಯಾನ್ ಹೋಲ್ಗಳನ್ನು ಸ್ವಚ್ಚಗೊಳಿಸುತ್ತದೆ. ಒಳಚರಂಡಿಯನ್ನು ಶುಚಿಗೊಳಿಸಲು ತಯಾರಿಸುವ ರಾಜ್ಯದ ಮೊದಲ ರೋಬೋಟ್ ಯೋಜನೆ ಇದಾಗಿದೆ.
ಈ ರೋಬೋಟ್ನನ್ನು ಕೇರಳದ ಕಂಪನಿಯು ತಯಾರಿಸಲಿದ್ದು, ಬ್ಯಾಂಡಿಕೂಟ್ ರೋಬೋಟ್ ತಯಾರಿಸಲು ಸುಮಾರು 45 ಲಕ್ಷ ರೂ. ವೆಚ್ಚ ತಗಲುತ್ತದೆ. ಮ್ಯಾನ್ ಹೋಲ್ಗಳನ್ನು ಸ್ವಚ್ಚಗೊಳಿಸಲು ಸಹಕರಿಯಾಗಿದೆ.
ಪಂಜಾಬ್ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತವು ಪ್ರಾರಂಭಿಸಿರುವ ‘ಮೇರಾ ಮುಕ್ತರ್, ಮೇರಾ ಮಾನ್’ ಮಿಷನ್ ಅಡಿಯಲ್ಲರುವ ಈ ಯೋಜನೆಯನ್ನು ಬಜ್ವಾ ಶ್ಲಾಘಿಸಿದರು.