ಕಾಶ್ಮೀರ: ಉತ್ತರ ಕಾಶ್ಮೀರದಲ್ಲಿ ಹಿಮಪಾತ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದಾರೆ.
ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸೇನಾ ಹೊರಠಾಣೆ ಹಿಮಪಾತಕ್ಕೆ ಸಿಲುಕಿತ್ತು.
ಕಾಶ್ಮೀರ: ಉತ್ತರ ಕಾಶ್ಮೀರದಲ್ಲಿ ಹಿಮಪಾತ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದಾರೆ.
ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸೇನಾ ಹೊರಠಾಣೆ ಹಿಮಪಾತಕ್ಕೆ ಸಿಲುಕಿತ್ತು.
ಇದನ್ನೂ ಓದಿ...ಸಿಯಾಚಿನ್ನಲ್ಲಿ ಹಿಮಪಾತ... 18 ಸಾವಿರ ಅಡಿ ಎತ್ತರದ ಪಹರೆಯಲ್ಲಿದ್ದ ಇಬ್ಬರು ಯೋಧರು ಹುತಾತ್ಮ!
ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆ ನಿನ್ನೆ ಸಂಜೆ ತಡವಾಗಿ ನಡೆಸಲಾಯಿತು. ಆದರೆ, ಕೆಟ್ಟ ಹವಾಮಾನದ ಪರಿಣಾಮದಿಂದಾಗಿ ಅದನ್ನು ಮುಂದೂಡಬೇಕಾಯಿತು. ಬುಧವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ಪುನರ್ ಆರಂಭಿಸಲಾಯಿತು. ಠಾಣೆಯಲ್ಲಿದ್ದ ನಾಲ್ವರಲ್ಲಿ ಮೂವರು ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ಬಂಡೀಪುರ ಜಿಲ್ಲೆಯ ಗುರೆಜ್ ಸೆಕ್ಟರ್‌ನ ದಾವರ್ ಪ್ರದೇಶದಲ್ಲಿ ಕಾಲಾಳುಪಡೆ ಗಸ್ತು ತಿರುಗುವಾಗ ಹಿಮಪಾತ ಸಂಭವಿಸಿದೆ. ಇದರಲ್ಲಿ ಇಬ್ಬರು ಸೈನಿಕರು ಸಿಕ್ಕಿಬಿದ್ದಿದ್ದಾರೆ. ಸೈನಿಕರನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.