ಕರ್ನಾಟಕ

karnataka

ETV Bharat / bharat

ಉಗ್ರಸಂಹಾರ: 6 ತಿಂಗಳಲ್ಲಿ 103 ಭಯೋತ್ಪಾಕರನ್ನು ಹೊಡೆದುರುಳಿಸಿದ ಸೇನೆ! -

ಪಾಕ್ ಆಕ್ರಮಿತ ಕಾಶ್ಮೀರ ವ್ಯಾಪ್ತಿಯ ಗಡಿ ನಿಯಂತ್ರ ರೇಖೆ (ಎಲ್​ಒಸಿ) ಬಳಿ, ಪಾಕ್​ ಬೆಂಬಲಿತ 16 ಉಗ್ರ ತರಬೇತಿ ಶಿಬಿರಗಳು ಸಕ್ರಿಯವಾಗಿವೆ ಎಂದು ಇತ್ತೀಚೆಗೆ ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಸಾಂದರ್ಭಿಕ ಚಿತ್ರ

By

Published : Jun 7, 2019, 7:06 PM IST

ನವದೆಹಲಿ:ಭಾರತೀಯ ಸೇನೆ ಕಳೆದ ಆರು ತಿಂಗಳಲ್ಲಿ ಕಣಿವೆ ರಾಜ್ಯ ಕಾಶ್ಮೀರ ಗಡಿ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದ ಪಾಕ್ ಕೃಪಾಪೋಷಿತ 103 ಉಗ್ರರನ್ನು ಹೊಡೆದುರುಳಿಸಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆ ನಿಯಮ ಉಲ್ಲಂಘಿಸಿ ಉಗ್ರರು ಆಗಾಗ ಒಳ ನುಸುಳುತ್ತಿರುತ್ತಾರೆ. ಈ ವೇಳೆ ಭಯೋತ್ಪಾದಕರ ಹಾಗೂ ಭಾರತೀಯ ಸೇನಾಪಡೆಯ ನಡುವೆ ನಡೆದ ಗುಂಡಿನ ದಾಳಿಗೆ ನೂರಾರು ಉಗ್ರರು ಹತರಾಗಿದ್ದಾರೆ.

ಹೀಗೆ, ಪಾಕ್​ನಲ್ಲಿ ತರಬೇತಿ ಪಡೆದು ಭಾರತದತ್ತ ಒಳ ನುಸುಳಲು ಯತ್ನಿಸುವ ಹಾಗೂ ಗಡಿಭಾಗದಲ್ಲಿ ಉಗ್ರ ಕೃತ್ಯಗಳನ್ನು ಎಸಗಿದ 254 ಭಯೋತ್ಪಾದಕರನ್ನು ಕಳೆದ ಒಂದು ವರ್ಷದಲ್ಲಿ ಹತ್ಯೆ ಮಾಡಲಾಗಿದೆ.

2019ರ ಜೂನ್​ 6ರ ವರೆಗೆ ಪಾಕಿಸ್ತಾನ ಸೇನೆ 1,170 ಬಾರಿ ಗಡಿ ರೇಖೆ ಉಲ್ಲಂಘಿಸಿ ದಾಳಿ ನಡೆಸಿದೆ. 2018ರ ಅವಧಿಯಲ್ಲಿ 1,629 ಬಾರಿ ನಿಯಮ ಮುರಿದಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಗಳು, ಪಾಕ್ ಆಕ್ರಮಿತ ಕಾಶ್ಮೀರ ವ್ಯಾಪ್ತಿಯ ಗಡಿ ನಿಯಂತ್ರ ರೇಖೆ (ಎಲ್​ಒಸಿ) ಬಳಿ ಪಾಕ್​ ಬೆಂಬಲಿತ 16 ಉಗ್ರ ತರಬೇತಿ ಶಿಬಿರಗಳು ಸಕ್ರಿಯವಾಗಿವೆ ಎಂದು ಮಾಹಿತಿ ನೀಡಿದ್ದರು.

For All Latest Updates

TAGGED:

ABOUT THE AUTHOR

...view details