ಡುಂಗರಪುರ(ರಾಜಸ್ಥಾನ):ಪ್ರಪಂಚದಾದ್ಯಂತ ಕೊರೊನಾ ಹಾವಳಿ ಜೋರಾಗಿದ್ದು, ಅನೇಕ ಮದುವೆ ಸಮಾರಂಭಗಳು ಇದೇ ಕಾರಣದಿಂದಾಗಿ ಮುಂದೂಡಿಕೆಯಾಗಿವೆ. ಆದರೆ ನಿಗದಿ ಮಾಡಿದ ದಿನಾಂಕದಂದೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿರುವ ಜೋಡಿ ವಿಡಿಯೋ ಕಾಲ್ ಮೂಲಕ ಮದುವೆ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾದಲ್ಲಿರುವ ಯುವಕ ಹಾಗೂ ರಾಜಸ್ಥಾನದ ಡುಂಗರಪುರದಲ್ಲಿರುವ ಯುವತಿ ವಿಡಿಯೋ ಕಾಲ್ನಲ್ಲೇ ಮದುವೆಯಾಗಿದ್ದಾರೆ. ಕೊರೊನಾ ಅಬ್ಬರ ಜೋರಾಗಿರುವ ಕಾರಣ ಆಫ್ರಿಕಾದಲ್ಲಿರುವ ಮಾರ್ಕಂಡೆ ತ್ರಿವೇದಿ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಆನ್ಲೈನ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.