ಗುವಾಹಟಿ: ಅಸ್ಸೋಂನ ಯುವ ವ್ಯಂಗ್ಯಚಿತ್ರಕಾರರು ತಮ್ಮ ಕಲೆಯ ಮೂಲಕ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆ ಜತೆಗೆ, ನಕಲಿ ಸುದ್ದಿಗಳ ಕುರಿತು ಅಭಿಯಾನವನ್ನೂ ಪ್ರಾರಂಭಿಸಿದ್ದಾರೆ.
ಕಲೆಯ ಮೂಲಕ ಕೊರೊನಾ ಜಾಗೃತಿ: ಅಸ್ಸೋಂ ವ್ಯಂಗ್ಯಚಿತ್ರಕಾರನ ವಿಶಿಷ್ಟ ಸೇವೆ - ಕಲೆಯ ಮೂಲಕ ಕೊರೊನಾ ಅರಿವು
ಅಸ್ಸೋಂನ ಯುವ ವ್ಯಂಗ್ಯಚಿತ್ರಕಾರರು ತಮ್ಮ ಕಲೆಯ ಮೂಲಕ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
![ಕಲೆಯ ಮೂಲಕ ಕೊರೊನಾ ಜಾಗೃತಿ: ಅಸ್ಸೋಂ ವ್ಯಂಗ್ಯಚಿತ್ರಕಾರನ ವಿಶಿಷ್ಟ ಸೇವೆ ಕಲೆಯ ಮೂಲಕ ಕೊರೊನಾ ಅರಿವು](https://etvbharatimages.akamaized.net/etvbharat/prod-images/768-512-7019454-65-7019454-1588339294576.jpg)
ಅಸ್ಸೋಂ ಮೂಲದ ವ್ಯಂಗ್ಯಚಿತ್ರಕಾರ ನಿತುಪರ್ಣ ರಾಜ್‌ಬೊಂಗ್ಶಿ ಅವರು ಡಾ.ಅನಾಮಿಕಾ ರಾಯ್ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ಈ ಅಭಿಯಾನವನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಾರಂಭಿಸಿದ್ದಾರೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನೂರಾರು ನಕಲಿ ಸುದ್ದಿಗಳನ್ನು ಬಹಿರಂಗಪಡಿಸುವುದು ಅವರ ಉದ್ದೇಶವಾಗಿದೆ.
‘ನಾನು ಕೊರೊನಾ ವೈರಸ್ ಮತ್ತು ಅದರ ಪ್ರಭಾವದ ಬಗ್ಗೆ ಜನರಿಗೆ ಅರಿವು ಮೂಡಿಸಲು ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದೇನೆ. ಸಮಾಜಕ್ಕೆ ಲಗತ್ತಿಸಲಾದ ಧಾರ್ಮಿಕ ಸಿದ್ಧಾಂತ, ಕೋಮುವಾದ, ಮೂಢನಂಬಿಕೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವೆ. ಕೊರೊನಾ ವೈರಸ್ ಕುರಿತು ನನ್ನ ಕಲೆಯ ಮೂಲಕ ಅರಿವು ಮೂಡಿಸಲು ಯತ್ನಿಸಿರುವೆ ಎಂದು ವ್ಯಂಗ್ಯಚಿತ್ರಕಾರ ನಿತುಪರ್ಣ ರಾಜ್‌ಬೊಂಗ್ಶಿ ಹೇಳಿದರು.