ಗ್ವಾಲಿಯರ್ (ಮಧ್ಯಪ್ರದೇಶ):ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾ ಚುನಾವನಾ ಪ್ರಚಾರ ಸಭೆಯಲ್ಲಿ 'ಕಾಂಗ್ರೆಸ್ಗೆ ವೋಟ್ ಮಾಡಿ' ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
'ಕಾಂಗ್ರೆಸ್'ಗೆ ವೋಟ್ ಮಾಡಿ ಎಂದು ಪ್ರಚಾರ ಸಭೆಯಲ್ಲಿ ಸಿಂಧಿಯಾ ಎಡವಟ್ಟು - Scindia slip of tongue, said to vote congress
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಗ್ವಾಲಿಯರ್ನ ದಾಬ್ರಾದಲ್ಲಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ನಗೆಪಾಟಲಿಗೀಡಾಗಿದ್ದಾರೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಕೊನೆಯ ಸುತ್ತಿನ ಪ್ರಚಾರ ನಡೆಯುತ್ತಿದೆ. ಗ್ವಾಲಿಯರ್ನ ದಾಬ್ರಾದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಶನಿವಾರ ಭರ್ಜರಿ ಪ್ರಚಾರ ಕೈಗೊಂಡಿದ್ದರು.
ಈ ವೇಳೆ ಪ್ರಚಾರ ಸಭೆಯನ್ನುದ್ದೇಶಿ ಮಾತನಾಡಿದ ಸಿಂಧಿಯಾ, 'ಕಮಲ' ಚಿಹ್ನೆ ಎಂದು ಹೇಳುವ ಬದಲು 'ಹಾಥ್ ಕಾ ಪಂಜಾ' ('ಕೈ' ಚಿಹ್ನೆ) ಮುಂದೆ ಬಟನ್ ಒತ್ತಿ ಎಂದು ಹೇಳಿದ್ದಾರೆ. ತಕ್ಷಣವೇ ಇದನ್ನು ಸರಿಪಡಿಸಿಕೊಂಡು ಭಾಷಣ ಮುಂದುವರೆಸಿದ್ದಾರೆ. ಇದನ್ನು ಕೇಳಿ ವೇದಿಕೆ ಮೇಲಿದ್ದ ಬಿಜೆಪಿ ಅಭ್ಯರ್ಥಿ ಸೇರಿ ನೆರೆದಿದ್ದ ಜನರು ನಕ್ಕಿದ್ದಾರೆ.