ವಯನಾಡು ( ಕೇರಳ ) :ಜಿಲ್ಲೆಯ ಜನರಿಗೆದೂರವಾಣಿ ಮೂಲಕ ಆರೋಗ್ಯ ಮಾಹಿತಿ ನೀಡುವ ಮಲ್ಟಿ-ಸ್ಪೆಷಾಲಿಟಿ ಟೆಲಿಮೆಡಿಸಿನ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಕೇರಳದ ವಯನಾಡಿನಲ್ಲಿ ಟೆಲಿಮೆಡಿಸಿನ್ ಸೇವೆಗೆ ಚಾಲನೆ - COVID 19
ಜನರಿಗೆ ಆರೋಗ್ಯ ಮಾಹಿತಿ ನೀಡುವ ಮೊಟ್ಟ ಮೊದಲ ಟೆಲಿಮೆಡಿಸಿನ್ ಸೇವೆಯನ್ನು ಕೇರಳದ ವಯನಾಡಿನಲ್ಲಿ ಪ್ರಾರಂಭಿಸಲಾಗಿದೆ. ಟೆಲಿಮೆಡಿಸಿನ್ ಸೇವೆಯ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಡಾ.ಅಧೀಲಾ ಅಬ್ದುಲ್ಲಾ ಗುರುವಾರ ಬಿಡುಗಡೆ ಮಾಡಿದರು.
ಕೂಡೆ' (ಜೊತೆಗೆ ) ಎಂಬ ಹೆಸರಿನ ಈ ಸೇವೆಯನ್ನು ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ವಿವಿಧ ವೈದ್ಯಕೀಯ ವಿಶೇಷ ವಿಭಾಗಗಳ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. 'ಕೂಡೆ' ಟೆಲಿಮೆಡಿಸಿನ್ ಸೇವೆಯ ಪೋಸ್ಟರ್ನ್ನು ಜಿಲ್ಲಾಧಿಕಾರಿ ಡಾ.ಅಧೀಲಾ ಅಬ್ದುಲ್ಲಾ ಗುರುವಾರ ಬಿಡುಗಡೆ ಮಾಡಿದರು. ಪ್ರಸ್ತುತ ಸೇವೆಯಡಿಯಲ್ಲಿ, ಜಿಲ್ಲೆಯ ಜನರು ಯಾವುದೇ ಖಾಯಿಲೆಗಳ ಕುರಿತು ವೈದ್ಯರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಬಹುದಾಗಿದೆ. ವಿಶೇಷ ಸಮಾಲೋಚನೆಗಳು ಲಭ್ಯವಿದೆ.
ರೋಗಿಗಳು ಕೂಡೆ ಸಹಾಯವಾಣಿಗೆ ಕರೆ ಮಾಡಿದರೆ ಸೇವಾ ಸಿಬ್ಬಂದಿ ರೋಗಿಯ ಮಾಹಿತಿ ಪಡೆದು ಸೂಕ್ತ ವೈದ್ಯರನ್ನು ಅವರಿಗೆ ಸಂಪರ್ಕಿಸಿ ಕೊಡುತ್ತಾರೆ. ಬಳಿಕ ರೋಗಿಯು ನೇರವಾಗಿ ವೈದ್ಯರೊಂದಿಗೆ ಮಾತನಾಡಿ, ಆರೋಗ್ಯ ನಿರ್ದೇಶನಗಳನ್ನು ಪಡೆಯಬಹುದು.