ನವೆದಹಲಿ:ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದಗಳ ವೇಳೆ ನಿಯಮ ಉಲ್ಲಂಘಿಸಿದ್ದ ವಿದೇಶಿ ವ್ಯಾಪಾರಿಗಳಿಗೆ 2018ರವರೆಗೆ 659.99 ಕೋಟಿ ದಂಡ ವಿಧಿಸಲಾಗಿದೆ. ಆದರೆ 2019ರ ಮೇವರೆಗೆ ಸಂಗ್ರಹವಾಗಿರುವ ದಂಡ ಹಣ ಕೇವಲ 2.97 ಕೋಟಿ ರೂಪಾಯಿ ಅಥವಾ 0.45 ರಷ್ಟು ಮಾತ್ರ ಎಂದು ಸಿಎಂಜಿ (ಲೆಕ್ಕನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ) ವರದಿ ನೀಡಿದೆ.
ಇತ್ತೀಚೆಗೆ 'ಮ್ಯಾನೇಜ್ಮೆಂಟ್ ಆಫ್ ಡಿಫೆನ್ಸ್ ಆಪ್ಸೆಟ್ಸ್' ಕುರಿತು ವರದಿ ನೀಡಿರುವ ಸಿಎಜಿ, ವಿದೇಶಿ ವ್ಯಾಪಾರಿಗಳಿಗೆ 659.99 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಸೇನಾ ಒಪ್ಪಂದಕ್ಕೆ 105.35 ಕೋಟಿ, ವಾಯು ಸೇನೆಯ ಒಪ್ಪಂದಕ್ಕೆ 478.35 ಕೋಟಿ ಹಾಗೂ ನೌಕಾ ದಳದ ಆಪ್‌ಸೆಟ್ ಡೀನ್‌ಗಳಿಗೆ 76.29 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ ಎಂದು ಹೇಳಿದೆ.