ನವದೆಹಲಿ: ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಸುಪ್ರೀಂ ಕೋರ್ಟ್ ವಿಧಿಸಿದ್ದ ಮರಣ ದಂಡನೆಯನ್ನು ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯವು ರದ್ದು ಗೊಳಿಸಿದ್ದು, ಈ ತೀರ್ಪನ್ನು ಪ್ರಧಾನಿ ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ.
ಮರಣದಂಡನೆ ರದ್ದಾಗಿದೆ, ಜಾಧವ್ ಬಿಡುಗಗೆ ಆದೇಶಿಸಿಲ್ಲ: ಕಾನೂನು ರೀತಿ ಕ್ರಮ, ಇಮ್ರಾನ್ ಖಾನ್ ಟ್ವೀಟ್ - ಇಮ್ರಾನ್ ಖಾನ್
ಕುಲಭೂಷಣ್ ಜಾಧವ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ರದ್ದುಗೊಳಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ.
ಇಮ್ರಾನ್ ಖಾನ್
ತೀರ್ಪಿನ ಬಗ್ಗೆ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಅಭಿನಂದಿಸುತ್ತೇನೆ. ಅಂತಾರಾಷ್ಟ್ರೀಯ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದ್ದು, ಬಿಡುಗಡೆಗೊಳಿಸಿ ತವರಿಗೆ ಕಳುಹಿಸಿ ಎಂದು ಹೇಳಿಲ್ಲ. ಪಾಕಿಸ್ತಾನ ಜನರಿಗೆ ಪಾತಕ ಎಸಗಿರುವ ಕೃತ್ಯದಲ್ಲಿ ಅವರು ಆರೋಪಿಯಾಗಿದ್ದಾರೆ ಹಾಗಾಗಿ ನ್ಯಾಯಾಲಯದ ತೀರ್ಪಿನಂತೆ ಮುಂದಿನ ನಡೆಗಳನ್ನು ಪರಾಮರ್ಶಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.