ಕರ್ನಾಟಕ

karnataka

ETV Bharat / bharat

ಗಿಲ್ಗಿಟ್​-ಬಾಲ್ಟಿಸ್ತಾನ್​ಗೆ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನ; ಪಾಕ್ ಪ್ರಧಾನಿ ಇಮ್ರಾನ್​ ಆದೇಶ

ಗಿಲ್ಗಿಟ್​-ಬಾಲ್ಟಿಸ್ತಾನ್​ನ ರಾಜಕೀಯ ಹಾಗೂ ಭೌಗೋಳಿಕ ಸ್ಥಾನಮಾನಗಳನ್ನು ಬದಲಾಯಿಸುವ ಪಾಕ್​ ಸರ್ಕಾರದ ಎಲ್ಲ ನಿರ್ಣಯಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈ ಪ್ರದೇಶದ ಹೋರಾಟಗಾರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

Imran Khan grants provisional provincial status to Gilgit-Baltistan
Imran Khan grants provisional provincial status to Gilgit-Baltistan

By

Published : Nov 1, 2020, 4:35 PM IST

Updated : Nov 2, 2020, 7:35 AM IST

ಇಸ್ಲಾಮಾಬಾದ್​: ಗಿಲ್ಗಿಟ್​-ಬಾಲ್ಟಿಸ್ತಾನ್​​​ ಪ್ರದೇಶದ ರಾಜಕೀಯ ಸ್ಥಾನಮಾನಗಳನ್ನು ಬದಲಾಯಿಸಕೂಡದು ಎಂದು ಆಗ್ರಹಿಸಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಗಿಲ್ಗಿಟ್​-ಬಾಲ್ಟಿಸ್ತಾನ್​​ ಪ್ರದೇಶಕ್ಕೆ ತಾತ್ಕಾಲಿಕವಾಗಿ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನವನ್ನು ನೀಡಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಆದೇಶ ಹೊರಡಿಸಿದ್ದಾರೆ.

"ಗಿಲ್ಗಿಟ್​-ಬಾಲ್ಟಿಸ್ತಾನ್​​ಗೆ ನಾವು ತಾತ್ಕಾಲಿಕವಾಗಿ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನ ನೀಡಿದ್ದನ್ನು ನಿಮಗೆ ತಿಳಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ." ಎಂದು ಗಿಲ್ಗಿಟ್​-ಬಾಲ್ಟಿಸ್ತಾನ್​​ಗೆ ಭೇಟಿ ನೀಡಿರುವ ಪ್ರಧಾನಿ ಇಮ್ರಾನ್​ ಹೇಳಿದ್ದಾರೆ.

ಒಂದು ಕಾಲದ ಪಾಕ್​ ಆಪ್ತಮಿತ್ರ ಸೌದಿ ಅರೇಬಿಯಾ, ತನ್ನ ಪಾಕ್​ ನಕಾಶೆಯಿಂದ ಗಿಲ್ಗಿಟ್​-ಬಾಲ್ಟಿಸ್ತಾನ್​ಗಳನ್ನು ಕೈಬಿಟ್ಟ ಬೆನ್ನಲ್ಲೇ ಪಾಕ್ ಈ ನಿರ್ಧಾರ ಕೈಗೊಂಡಿದೆ. ಆದರೆ ಪಾಕ್​ನ ಈ ನಿರ್ಧಾರದಿಂದ ದೊಡ್ಡ ಮಟ್ಟದ ಪ್ರತಿಭಟನೆಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ.

ಕಳೆದ ಅಕ್ಟೋಬರ್ 8 ರಂದು ಪಾಕ್​ ಆಕ್ರಮಿತ ಕಾಶ್ಮೀರದ ನಗರವಾದ ಮುಜಫ್ಫರಾಬಾದ್​ನಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್​ ಫ್ರಂಟ್​ ಹಾಗೂ ಸ್ಟೂಡೆಂಟ್​ ಲಿಬರೇಶನ್ ಫ್ರಂಟ್​ಗಳ ವತಿಯಿಂದ ಪಾಕ್​ ಸರ್ಕಾರದ ವಿರುದ್ಧ ಬೃಹತ್​ ಪ್ರತಿಭಟನೆ ನಡೆಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಗಿಲ್ಗಿಟ್​-ಬಾಲ್ಟಿಸ್ತಾನ್​ನ ರಾಜಕೀಯ ಹಾಗೂ ಭೌಗೋಳಿಕ ಸ್ಥಾನಮಾನಗಳನ್ನು ಬದಲಾಯಿಸುವ ಪಾಕ್​ ಸರ್ಕಾರದ ಎಲ್ಲ ನಿರ್ಣಯಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈ ಪ್ರದೇಶದ ಹೋರಾಟಗಾರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

Last Updated : Nov 2, 2020, 7:35 AM IST

ABOUT THE AUTHOR

...view details