ETV Bharat / bharat
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
By
Published : Aug 19, 2020, 5:53 AM IST
| Updated : Aug 19, 2020, 6:27 AM IST
- ಇಂದಿನಿಂದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ... ಹೊಸ ಕಾಯ್ದೆಯಂತೆ ಕೃಷಿ ಭೂಮಿ ನೋಂದಾಯಿಸುವಂತೆ ಆದೇಶ
- ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿಯ ನಿವಾಸದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ
- ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹಾಗೂ ವಿಪಿ-ವಿಹೆಚ್ಪಿ ರೈ ಅವರು ರಾಮ ಜನ್ಮಭೂಮಿ ದೇವಾಲಯದ ಕುರಿತು ನವದೆಹಲಿಯ ವಿಹೆಚ್ಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
- ದೇಶದಲ್ಲಿ ಕೊರೊನಾ ನಿರ್ವಹಣೆ ಹಾಗೂ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸಂಸದೀಯ ಸ್ಟ್ಯಾಂಡಿಂಗ್ ಕಮಿಟಿ ಸಭೆ.
- ಸುಶಾಂತ್ ಸಿಂಗ್ ರಜಪೂತ್ ಕೇಸ್: ಪ್ರಕರಣವನ್ನು ಬಿಹಾರದಿಂದ ಮುಂಬೈಗೆ ಹಸ್ತಾಂತರಿಸುವಂತೆ ಕೋರಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟ
- ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನರಾದ ಸಂಗೀತ ಲೋಕದ ದಿಗ್ಗಜ ಪದ್ಮವಿಭೂಷಣ ಪಂಡಿತ್ ಜಸ್‍ರಾಜ್ ಅವರ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ ನೆರವೇರಲಿದೆ
- ಕೋವಿಡ್: ಲಸಿಕೆಯ ಮೂರನೇ ಹಂತದ ಪ್ರಯೋಗ ಇಂದು ನಡೆಸುವ ನಿರೀಕ್ಷೆ ಇದೆ ಎಂದು ನೀತಿ ಆಯೋಗದ ಸದಸ್ಯರಾಗಿರುವ ವಿ ಕೆ ಪೌಲ್ ಮಾಹಿತಿ ನೀಡಿದ್ದಾರೆ.
- ರಾಜ್ಯ ಸರ್ಕಾರದಿಂದ ಸಿಗದ ಲಾಕ್‌ಡೌನ್ ಪರಿಹಾರ ಹಣ: ಇಂದು ಬೆಂಗಳೂರಿನಲ್ಲಿ ಆಟೋ ಚಾಲಕರ ಬೃಹತ್ ಪ್ರತಿಭಟನೆ
- ನವದೆಹಲಿಯಲ್ಲಿ ಭಾರತೀಯ ನೌಕಾಸೇನೆಯ ನೌಕಾ ಕಮಾಂಡರ್ಸ್ ಕಾನ್ಫರೆನ್ಸ್. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಸಮಾವೇಶದ ಉದ್ಘಾಟನಾ ಭಾಷಣ.
Last Updated : Aug 19, 2020, 6:27 AM IST