ಕರ್ನಾಟಕ

karnataka

ETV Bharat / bharat

ನಮ್ಮ ದೇಶದ ಈ ರಾಜ್ಯದಲ್ಲಿ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಕೆಲಸ ಸಿಗಲ್ಲ! - ಅಸ್ಸೋಂ ಸಚಿವ ಸಂಪುಟ ಲೇಟೆಸ್ಟ್​ ಸುದ್ದಿ

ಅಸ್ಸೋಂನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. 2021ರ ಜನವರಿ ತಿಂಗಳ ನಂತರ ರಾಜ್ಯದಲ್ಲಿ ಸರ್ಕಾರಿ ಕೆಲಸ ಸಿಗಬೇಕಾದರೆ ಆ ಕುಟುಂಬದಲ್ಲಿ ಇಬ್ಬರಿಗಿಂತ ಕಡಿಮೆ ಮಕ್ಕಳು ಇರಬೇಕಂತೆ.

2ಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ಸಿಗಲ್ಲ ಸರ್ಕಾರಿ ಕೆಲಸ

By

Published : Oct 22, 2019, 3:18 PM IST

ದಿಸ್ಪುರ್(ಅಸ್ಸೋಂ) :ಅಸ್ಸೋಂ ರಾಜ್ಯ ಸರ್ಕಾರ ಎಲ್ಲರೂ ಹುಬ್ಬೇರಿಸುವ ಪ್ರಮುಖ ನಿರ್ಧಾರ ಕೈಗೊಂಡಿದೆ. 2021ರ ಜನವರಿ ತಿಂಗಳಿಂದ ಅನ್ವಯಿಸುವಂತೆ ಇಲ್ಲಿ ಸರ್ಕಾರಿ ಕೆಲಸ ಸಿಗಬೇಕಾದರೆ ಆ ಕುಟುಂಬದಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರಬಾರದಂತೆ.

126 ಸದಸ್ಯ ಬಲದ ಅಸ್ಸೋಂ ವಿಧಾನ ಸಭೆ, ಈ ಜನಸಂಖ್ಯಾ ನೀತಿಯನ್ನು ರಾಜ್ಯದಲ್ಲಿ ಅಳವಡಿಸುವ ನಿರ್ಣಯ ಮಾಡಿದ್ದು, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಸರ್ಕಾರಿ ಕೆಲಸ ಸಿಗಬೇಕಾದರೆ ಇಬ್ಬರು ಮಕ್ಕಳಷ್ಟೇ ಆ ಕುಟುಂಬದಲ್ಲಿರಬೇಕಂತೆ.

ಸಚಿವ ಸಂಪುಟ ಸಭೆಯಲ್ಲಿ ಇನ್ನೊಂದು ಮಹತ್ವದ ನಿರ್ಧಾರಕ್ಕೆ ಬರಲಾಗಿದ್ದು, ರಾಜ್ಯದಲ್ಲಿ ಹೊಸ ಭೂ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸರ್ಕಾರವು ಇಲ್ಲಿನ ಸ್ಥಳೀಯ ನಿವಾಸಿಗಳಿಗೆ 43,200 ಚದರಡಿ ಕೃಷಿ ಭೂಮಿಯನ್ನು ನೀಡುತ್ತದೆ. ಜೊತೆಗೆ 7,200 ಚದರಡಿ ಜಾಗವನ್ನು ಮನೆ ನಿರ್ಮಾಣಕ್ಕಾಗಿ ನೀಡಲು ನಿರ್ಧರಿಸಿದೆ. ಇದರ ಜೊತೆಗೆ ಷರತ್ತೊಂದನ್ನು ವಿಧಿಸಲಾಗಿದ್ದು, ಫಲಾನುಭವಿಯು 15 ವರ್ಷಗಳ ಬಳಿಕವಷ್ಟೇ ಈ ಭೂಮಿಯನ್ನು ಮಾರಾಟ ಮಾಡಬಹುದಾಗಿದೆ.

ಇನ್ನೊಂದೆಡೆ ಬಸ್​ ದರವನ್ನು ಶೇ. 25ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

ಈ ಎಲ್ಲಾ ಹೊಸ ನಿರ್ಣಯಗಳು 2021ರ ಜನವರಿ ತಿಂಗಳಿಂದ ಅನ್ವಯಿಸಲಿದೆ.

ABOUT THE AUTHOR

...view details