ಕರ್ನಾಟಕ

karnataka

ETV Bharat / bharat

ಮೋದಿ 2.0 ಪ್ರಥಮ ವಾರ್ಷಿಕೋತ್ಸವ: ಮೋದಿಯ ವಿದೇಶ ಪ್ರವಾಸಗಳು ಏನು ಸಾಧಿಸಿವೆ? - ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ

ಮೇ 30ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಎರಡನೇ ಅಧಿಕಾರಾವಧಿಯ ಒಂದು ವರ್ಷವನ್ನು ಪೂರ್ಣಗೊಳಿಸಲಿದೆ. ಪ್ರಧಾನಿ ಮೋದಿಯ ವಿದೇಶಿ ಪ್ರವಾಸಗಳನ್ನು ಗಮನಿಸಿದರೆ ಅದರಲ್ಲಿ ಹಲವಾರು ರಾಜತಾಂತ್ರಿಕ ಮಹತ್ವಗಳಿವೆ.

modi
modi

By

Published : May 26, 2020, 2:02 PM IST

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಎರಡನೇ ಅಧಿಕಾರಾವಧಿಯ ಒಂದು ವರ್ಷವನ್ನು ಮೇ 30 ರಂದು ಪೂರ್ಣಗೊಳಿಸಲಿದೆ. ಈ ಅಧಿಕಾರಾವಧಿಯಲ್ಲಿ, ಮೋದಿ ಸರ್ಕಾರ ಜಾಗತಿಕ ಮಟ್ಟದಲ್ಲಿ ತನ್ನ ರಾಜತಾಂತ್ರಿಕತೆ ಮೂಲಕ ಗಮನಸೆಳೆದಿದೆ. ಜೊತೆಗೆ ವಿದೇಶಿ ಹೂಡಿಕೆಗೆ ಹೆಚ್ಚಿನ ಮನ್ನಣೆ ನೀಡಿದೆ.

ಮೋದಿಯವರ ಕಳೆದ ವರ್ಷದ ವಿದೆಶಿ ಪ್ರವಾಸಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹಲವಾರು ವಿಚಾರಗಳು ಗಮನಕ್ಕೆ ಬರುತ್ತವೆ. ಪ್ರಾಧಾನಿಯ ಎರಡನೇ ಅವಧಿಯ ಮೊದಲ ವರ್ಷದ ವಿದೇಶ ಪ್ರವಾಸಗಳು ಮತ್ತು ಅವುಗಳ ರಾಜತಾಂತ್ರಿಕ ಮಹತ್ವಗಳ ಮಾಹಿತಿ ಇಲ್ಲಿದೆ.

ಭಾರತ-ಕಿರ್ಗಿಸ್ತಾನ್:

ಆರೋಗ್ಯ, ಭದ್ರತೆ, ರಕ್ಷಣೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಗಳು ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳಿಗೆ 2019ರ ಜೂನ್‌ನಲ್ಲಿ ಸಹಿ ಹಾಕಿದವು.

ಭಾರತ- ಸೌದಿ ಅರೇಬಿಯಾ:

ಸೌದಿ ಅರೇಬಿಯಾ ಭಾರತದ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರುವುದು ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಹಕಾರದ ಪ್ರಮುಖ ಕ್ಷೇತ್ರ. ಫೆಬ್ರವರಿ 2019ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸೌದಿಯ ರಾಜಕುಮಾರ, ವಿವಿಧ ಕ್ಷೇತ್ರಗಳಲ್ಲಿ ಭಾರತದಲ್ಲಿ 100 ಬಿಲಿಯನ್​ಗಿಂತಲೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವುದಾಗಿ ಹೇಳಿದ್ದರು. ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ಹೂಡಿಕೆ ಮಾಡಲು ಸೌದಿ ಆಸಕ್ತಿ ತೋರಿದೆ.

ಭಾರತ-ರಷ್ಯಾ:

ತೈಲ ಮತ್ತು ಅನಿಲ ಕ್ಷೇತ್ರ, ಕಲ್ಲಿದ್ದಲು, ವ್ಯಾಪಾರ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಒಪ್ಪಂದಗಳಿವೆ. ಹೂಡಿಕೆಯ ಸಹಯೋಗಕ್ಕಾಗಿ ಇನ್ವೆಸ್ಟ್ ಇಂಡಿಯಾ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮೇಕ್-ಇನ್-ಇಂಡಿಯಾ ಕಾರ್ಯಕ್ರಮದಡಿ ರಷ್ಯಾ ಮೂಲದ ಶಸ್ತ್ರಾಸ್ತ್ರಗಳಿಗಾಗಿ ಬಿಡಿಭಾಗಗಳನ್ನು ಉತ್ಪಾದಿಸುವ ಬಗ್ಗೆ ಸಹಿ ಹಾಕಲಾಯಿತು. ಮೂಲ ಸೌಕರ್ಯಗಳ ಒಪ್ಪಮದಕ್ಕೂ ಸಹಿ ಹಾಕಲಾಯಿತು.

ಭಾರತ- ಜರ್ಮನಿ:

ಕೃಷಿ, ಕಡಲ ತಂತ್ರಜ್ಞಾನ, ಆಯುರ್ವೇದ, ಯೋಗ ಮತ್ತು ಸಂಶೋಧನಾ ಸಹಕಾರ ಕ್ಷೇತ್ರಗಳಲ್ಲಿ 2019ರ ನವೆಂಬರ್‌ನಲ್ಲಿ ಜರ್ಮನ್ ಚಾನ್ಸೆಲರ್ ಎರಡು ದಿನಗಳ ಕಾಲ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಜರ್ಮನಿ ನಡುವೆ 9 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಕರಾವಳಿ ಮತ್ತು ಕಡಲ ತಂತ್ರಜ್ಞಾನದಲ್ಲಿ ಸಹಕಾರ, ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಸಹಕಾರ, ಆಯುರ್ವೇದ, ಯೋಗ ಮತ್ತು ಧ್ಯಾನದಲ್ಲಿ ಶೈಕ್ಷಣಿಕ ಸಹಯೋಗದ ಕುರಿತು ಒಪ್ಫಂದ ಮಾಡಿಕೊಳ್ಳಲಾಗಿದೆ.

ಭಾರತ-ಬ್ರೆಜಿಲ್:

ಬ್ರೆಜಿಲ್ ಹಾಗೂ ಭಾರತದ ಸಹಭಾಗಿತ್ವ ಹೆಚ್ಚಿಸಲು ಇಂಧನ, ಭದ್ರತೆ, ಕೃಷಿ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ವ್ಯಾಪಕ ಸಹಕಾರ ಪ್ರಾರಂಭಿಸಲಾಯಿತು. ನವೀಕರಿಸಬಹುದಾದ ಇಂಧನ ಶಕ್ತಿಯ ಪ್ರಾಮುಖ್ಯತೆ, ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಸುರಕ್ಷತೆಗೆ ಕೊಡುಗೆ ನಿಡಲು ಪರಸ್ಪರ ಹೂಡಿಕೆ ಉತ್ತೇಜಿಸಲು ಒಪ್ಪಂದ ಮಾಡಿಕೊಳ್ಳಲಾಯಿತು. ಸೈಬರ್ ಭದ್ರತೆ, ಜೈವಿಕ ಶಕ್ತಿ ಸಹಕಾರ, ತೈಲ ಮತ್ತು ನೈಸರ್ಗಿಕ ಅನಿಲ, ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳು, ಆರೋಗ್ಯ ಮತ್ತು ಔಷಧ, ಹೋಮಿಯೋಪತಿ ಮತ್ತು ತಾಂತ್ರಿಕ ಜ್ಞಾನದ ಕ್ಷೇತ್ರದಲ್ಲಿ ಸಹಕಾರ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಭಾರತ- ಮ್ಯಾನ್ಮಾರ್:

2020ರ ಫೆಬ್ರವರಿಯಲ್ಲಿ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಭಾರತೀಯ ಅನುದಾನ ಸಹಾಯ (ಕ್ಯೂಐಪಿ) ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸಂಘರ್ಷ ಪೀಡಿತ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಭಾರತ-ಯುಎಸ್ಎ:

ವೈದ್ಯಕೀಯ ಉತ್ಪನ್ನಗಳ ಸುರಕ್ಷತೆಗೆ ಸಂಬಂಧಿಸಿದಂತೆ, ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹೊಸ ವಿಧಾನಗಳ ಮೂಲಕ ಎರಡೂ ದೇಶಗಳ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುಲು ಎರಡೂ ದೇಶಗಳ ಆರೋಗ್ಯ ಇಲಾಖೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ABOUT THE AUTHOR

...view details