ಘಾಜಿಯಾಬಾದ್:ಬಿಗ್ ಬಾಸ್ ಸೀಸನ್ 13 ರ ಪ್ರಸಾರವನ್ನ ನಿಲ್ಲಿಸುವಂತೆ ಕೋರಿ ಬಿಜೆಪಿ ಎಂಎಲ್ಎ ಒಬ್ಬ ಕೇಂದ್ರ ಮಾಹಿತಿ ಮತ್ತು ಪ್ರಸಾರಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.
ಬಿಗ್ ಬಾಸ್- 13 ನಿಲ್ಲಿಸಿ: ಪ್ರಸಾರ ಖಾತೆ ಸಚಿವರಿಗೆ ಶಾಸಕನ ಪತ್ರ! - ಬಿಗ್ ಬಾಸ್ 13 ನಿಲ್ಲಿಸಿ
ಬಿಗ್ ಬಾಸ್ ಕಾರ್ಯಕ್ರಮ ಜನರಿಗೆ ಅಶ್ಲೀಲತೆ ತೋರಿಸುತ್ತಿದೆ ಎಂದು ಆರೋಪಿಸಿ, ಉತ್ತರಪ್ರದೇಶದ ಬಿಜೆಪಿ ಶಾಸಕನೊಬ್ಬ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.
ಶಾಸಕನ ಪತ್ರ
ಬಿಗ್ ಬಾಸ್ ಕಾರ್ಯಕ್ರಮ ಜನರಿಗೆ ಅಶ್ಲೀಲತೆ ತೋರಿಸುತ್ತಿದೆ ಹಾಗೂ ಸಾಮಾಜಿಕ ನೈತಿಕತೆಯನ್ನ ಹಾಳು ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜಾರ್ ತಕ್ಷಣವೇ ಬಿಗ್ಬಾಸ್ ನಿಲ್ಲಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.
ನಂದ ಕಿಶೋರ್ ಗುರ್ಜಾರ್ ಲೋನಿ ಕ್ಷೇತ್ರದ ಶಾಸಕರಾಗಿದ್ದಾರೆ.
Last Updated : Oct 10, 2019, 10:27 AM IST