ನವದೆಹಲಿ:ಪ್ರಸಕ್ತ ಹಣಕಾಸು ವರ್ಷದ (2019-20) ಭಾರತದ ಬೆಳವಣಿಗೆಯ ಅಂದಾಜನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶೇ. 4.8% ಕ್ಕೆ ಕಡಿತಗೊಳಿಸಿದ್ದು, ಇದನ್ನು 'ನೆಗೆಟಿವ್ ಸರ್ಪ್ರೈಜ್' ಎಂದು ಉಲ್ಲೇಖಿಸಿದೆ.
ಕಳೆದ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಭಾರತದ ಆರ್ಥಿಕ ಕುಸಿತವು ಶೇ 0.1 ರಷ್ಟು ಕಡಿತವಾಗಿದೆ. ಇನ್ನು 2021 ರ ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 0.2 ರಷ್ಟು ಕಡಿತಗೊಂಡಿದ್ದು, ಶೇ.3.4 ಕ್ಕೆ ಇಳಿದಿದೆ ಎಂದು ಐಎಂಎಫ್ನ ವರ್ಲ್ಡ್ ಎಕನಾಮಿಕ್ ಔಟ್ ಲುಕ್ (WEO) ತಿಳಿಸಿದೆ.