ಕರ್ನಾಟಕ

karnataka

ETV Bharat / bharat

ಮಾರ್ಚ್ ವೇಳೆಗೆ ಕೋವಿಡ್ ಲಸಿಕೆ ಬಿಡುಗಡೆ ಸಾಧ್ಯತೆ: ಐಎಂಎ ಅಧ್ಯಕ್ಷ - ದೆಹಲಿಯಲ್ಲಿ ಕೋವಿಡ್ ಮೂರನೇ ಅಲೆ

ದೇಶದಲ್ಲಿ ಕೋವಿಡ್ ಲಸಿಕೆ ಪ್ರಯೋಗದ ಹಂತದಲ್ಲಿದ್ದು, ಎಲ್ಲವೂ ಸರಿಯಿದೆ ಎಂದು ಸಾಬೀತಾದಲ್ಲಿ ಕೂಡಲೇ ಬಿಡುಗಡೆ ಮಾಡಲಾಗುವುದು ಅಂತಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರಾಜನ್ ಶರ್ಮಾ ತಿಳಿಸಿದ್ದಾರೆ.

march
ಐಎಂಎ ಅಧ್ಯಕ್ಷ

By

Published : Dec 2, 2020, 3:44 PM IST

ನವದೆಹಲಿ: ಕೋವಿಡ್ ಲಸಿಕೆ ಪ್ರಯೋಗ ಹಂತದಲ್ಲಿದ್ದು, ವ್ಯಾಕ್ಸಿನ್ ಸರಿಯಿದೆ ಎಂದು ಸಾಬೀತಾದಲ್ಲಿ ಕೂಡಲೇ ಬಿಡುಗಡೆ ಮಾಡಲು ಅನುಮತಿ ಕೋರಿ ಐಎಂಎ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಅಂತಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರಾಜನ್ ಶರ್ಮಾ ಹೇಳಿದ್ದಾರೆ.

ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಲಸಿಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಲಸಿಕೆ ವಿತರಣೆ ಹಾಗೂ ಸಂಗ್ರಹಣೆಗಾಗಿ ವೈದ್ಯರ ತಂಡ ಸಿದ್ಧವಾಗಿದೆ ಅಂತಾ ಡಾ.ರಾಜನ್ ಶರ್ಮಾ ಹೇಳಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ 7 ರಷ್ಟಿದೆ. ಆದರೂ ಜನತೆ ಕೋವಿಡ್ ನಿಯಮ ಪಾಲಿಸಿ ಎಚ್ಚರಿಕೆಯಿಂದ ಇರಬೇಕು. ಆರ್‌ಟಿ ಪಿಸಿಆರ್ ಪರೀಕ್ಷಾ ದರವನ್ನು 800 ರೂ.ಗೆ ಇಳಿಸಿದಂತೆ, ಇತರೆ ಪರೀಕ್ಷಾ ದರವನ್ನು ಇಳಿಸಲು ಚಿಂತನೆ ನಡೆಸಲಾಗಿದೆ. ಇದು ವೈರಸ್ ಹರಡುವಿಕೆ ನಿಯಂತ್ರಿಸಲು ಕಾರಣವಾಗುತ್ತದೆ. ದೆಹಲಿಯಲ್ಲಿ ವೈರಸ್​ನ ಮೂರನೇ ಅಲೆಯಿಂದ, ನಿತ್ಯ 8 ಸಾವಿರ ಜನರಿಗೆ ಸೋಂಕು ತಗುಲಿತ್ತು. ನವೆಂಬರ್ ತಿಂಗಳೊಂದರಲ್ಲೇ 83 ಸಾವಿರ ಜನರಿಗೆ ವೈರಸ್ ದೃಢಪಟ್ಟಿದ್ದು, ಚೇತರಿಕೆ ಪ್ರಮಾಣವೂ ಹೆಚ್ಚಿದೆ ಎಂದರು.

ABOUT THE AUTHOR

...view details