ನವದೆಹಲಿ/ ಬೆಂಗಳೂರು:ಲೋಕಸಭೆಯಲ್ಲಿ ಅಂಗೀಕಾರಗೊಂಡ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಸೂದೆ (ಎನ್ಎಂಸಿ) ಖಂಡಿಸಿ ನಾಳೆ ಖಾಸಗಿ ವೈದ್ಯರು ಅಲ್ಪಾವಧಿ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಕರೆ ನೀಡಿದೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿರುವ ಮುಷ್ಕರದಲ್ಲಿ ಎಲ್ಲ ಖಾಸಗಿ ವೈದ್ಯರು ಭಾಗವಹಿಸಬೇಕೆಂದು ಐಎಂಎ ಸೂಚಿಸಿದೆ. ಅಲ್ಲದೆ, ಗುರುವಾರದವರೆಗೂ ಪ್ರತಿಭಟನೆ ಮುಂದುವರಿಸುವಂತೆ ಹೇಳಿದೆ. ಇದು ಹೊರರೋಗಿಗಳ ಸೇವೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗ್ತಿದೆ.
ಬೆಂಗಳೂರಿನ ಚಾಮರಾಜಪೇಟೆಯ ಎಂಎಂಎ ಎದುರು ವೈದ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ತುರ್ತು ಸೇವೆ ಮಾತ್ರ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.