ಕರ್ನಾಟಕ

karnataka

ETV Bharat / bharat

ಎಲ್ಲ ತ್ಯಾಗಕ್ಕೂ ಸಿದ್ಧ, ಮೈತ್ರಿ ಸರ್ಕಾರ ಉಳಿಸುವ ಕೆಲಸ ನನ್ನದು: ಡಿಕೆಶಿ - undefined

ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಎಲ್ಲ ತ್ಯಾಗಕ್ಕೂ ತಾವು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.

ಡಿಕೆ ಶಿವಕುಮಾರ್​​

By

Published : Jul 6, 2019, 6:45 PM IST

ಬೆಂಗಳೂರು:ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ನ ಟ್ರಬಲ್​ ಶೂಟರ್, ಸಚಿವ ಡಿ.ಕೆ.ಶಿವಕುಮಾರ್​ ಇದೇ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ಹೊರಹಾಕಿದ್ದು, ಹೋಗುವವರನ್ನ ಹಿಡಿದುಕೊಳ್ಳಲು ಆಗಲ್ಲ. ಸಮಸ್ಯೆ ಇರಬಹುದು. ಆದರೆ ಎಲ್ಲ ಸರಿ ಹೋಗುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ರಾಜೀನಾಮೆಗೆ ಬೇಕಾದಷ್ಟು ಪ್ರೋಸಸ್ ಇದೆ. ನೋಡೋಣ, ನಾನು ಪ್ರಾಮಾಣಿಕವಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯವರು ಎನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದು, ಬಿಜೆಪಿಯವರು ಯಾವ ಬಿಲ್ಡರ್​ಗಳಿಗೆ ಕರೆ ಮಾಡಿ ಮಾತನಾಡುತ್ತಿದ್ದಾರೆ. ಎಷ್ಟೆಷ್ಟು ಕೇಳುತ್ತಿದ್ದಾರೆ ಎಂಬ ಮಾಹಿತಿ ನಮಗಿದೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್​​

ಇದೇ ವೇಳೆ ತಮ್ಮ ಮಾತು ಮುಂದುವರಿಸಿದ ಡಿಕೆಶಿ, ಎಲ್ಲ ತ್ಯಾಗಕ್ಕೂ ನಾನು ಸಿದ್ಧನಾಗಿದ್ದು, ಸರ್ಕಾರ ಉಳಿಸುವ ಕೆಲಸ ನಡೆಯಲಿದೆ. ಸಂಪೂರ್ಣವಾಗಿ ನನಗೆ ವಿಶ್ವಾಸವಿದೆ. ಈ ಹಿಂದೆ ಇದೇ ರೀತಿ ಹೋದ ಅನೇಕರು ವಾಪಸ್​ ಬಂದಿದ್ದಾರೆ. ಈಗಾಗಲೇ ರಾಮಲಿಂಗಾರೆಡ್ಡಿ ಜತೆ ನಾನು ಮಾತನಾಡಿದ್ದು, ಸರ್ಕಾರ ಉಳಿಸಿಕೊಳ್ಳಲು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಮ್ಮಿಂದ ಎಲ್ಲೆಲ್ಲಿ ತಪ್ಪಾಗಿದೆಯೋ ಅದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುತ್ತೇವೆ. ಸರ್ಕಾರವನ್ನು ಉಳಿಸಿಕೊಳ್ಳುವುದಾಗಿ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details