ಕರ್ನಾಟಕ

karnataka

ETV Bharat / bharat

ವೀರಯೋಧ ಅಭಿನಂದನ್​ರಂತೆಯೇ ಫೇಮಸ್​ ಆಗ್ತಿದೆ ಅವರ ಆ ಹೇಳಿಕೆ!

ವಿಂಗ್​ ಕಮ್ಯಾಂಡರ್​ ಅಭಿನಂದನ್ ಅವರ "I am not supposed to tell you this." ಹೇಳಿಕೆ ಸಾಕಷ್ಟು ಟ್ರೆಂಡ್​ ಹುಟ್ಟುಹಾಕಿದೆ

ವಿಂಗ್​ ಕಮ್ಯಾಂಡರ್​ ಅಭಿನಂದನ್ ಹೇಳಿಕೆಯನ್ನು ಜಾಗೃತಿಗೆ ಬಳಸಿಕೊಂಡ ನಾಗ್ಪುರ ನಗರ ಪೊಲೀಸರು

By

Published : Mar 3, 2019, 2:16 PM IST

ನಾಗ್ಪುರ: ಪಾಕ್​ನೊಂದಿಗೆ ವೈಮಾನಿಕ ಹೋರಾಟದಲ್ಲಿ ಆಕಸ್ಮಿಕವಾಗಿ ಅಲ್ಲಿನ ಸೇನೆಯಿಂದ ಬಂಧಿತರಾಗಿದ್ದರು. ಬಳಿಕ ಸುರಕ್ಷಿತವಾಗಿ ಹಿಂದಿರುಗಿರುವ ವಿಂಗ್​ ಕಮ್ಯಾಂಡರ್​ ಅಭಿನಂದನ್ ಇದೀಗ ಭಾರತ ಹೀರೋ ಆಗಿದ್ದಾರೆ. ಅಭಿನಂದನ್​ರ ಹೆಸರು, ಗಿರಿಜಾ ಮೀಸೆಯಂತೆಯೇ, ಅವರಾಡಿದ ಮಾತುಗಳೂ ಇದೀಗ ಟ್ರೆಂಡ್​ ಆಗ್ತಿವೆ.

ಅಭಿನಂದನ್​ರನ್ನು ಬಂಧಿಸಿದ ದಿನವೇ, ಪಾಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಟೀ ಕುಡಿಯುತ್ತಿದ್ದ ಅಭಿನಂದನ್​, ಪಾಕ್​ ಕೇಳಿದ್ದ ಕೆಲವು ಪ್ರಶ್ನೆಗಳಿಗೆ "I am not supposed to tell you this." ಎಂದೇ ಉತ್ತರಿಸುತ್ತಿದ್ದರು. ಪ್ರಾಣಕ್ಕೆ ಅಪಾಯವೊಡ್ಡುವ ಶತ್ರು ಎದುರಲ್ಲೇ ಇದ್ದರೂ, ಭಾರತದ ಮೇಲಿನ ಅಭಿಮಾನದಿಂದ ಯಾವ ಸುಳಿವನ್ನೂ ಅವರು ಬಿಟ್ಟುಕೊಟ್ಟಿರಲಿಲ್ಲ. ಅವರ ಕೆಚ್ಚೆದೆ, ಶೌರ್ಯ, ಸಾಹಸವನ್ನು ಇಡೀ ಭಾರತ ಕೊಂಡಾಡಿತು.

ಅವರ "I am not supposed to tell you this." ಎಂಬ ಮಾತು ಇದೀಗ ಟ್ರೆಂಡ್​ ಆಗಿದೆ. ಇದೇ ಹೇಳಿಕೆಯನ್ನು ಸಾಮಾಜಿಕ ಜಾಗೃತಿಗೂ ಬಳಸುತ್ತಿರುವ ನಾಗ್ಪುರ ನಗರ ಪೊಲೀಸರು, ಸೈಬರ್ ಸೆಕ್ಯುರಿಟಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಯಾರಾದರೂ ನಿಮ್ಮ ಮೊಬೈಲ್​ ನಂಬರ್​ಗೆ ಬರುವ ಒಟಿಪಿಯನ್ನು ಕೇಳಿದರೆ, "I am not supposed to tell you this." ಎಂದು ಹೇಳಿ ಎಂದು ಟ್ವಿಟ್ಟರ್​ ಮೂಲಕ ಸಲಹೆ ನೀಡಿದೆ. ಜತೆಗೆ ಅಭಿನಂದನ್ ಅವರಿಗೆ ಸ್ವಾಗತವನ್ನೂ ಕೋರಲಾಗಿದೆ.

“When someone asks for your OTP : 'I am not supposed to tell you this' #WelcomeHomeAbhinandan #NagpurPolice"

ನಾಗ್ಪುರ ಪೊಲೀಸರು ವಿನೂತನ ಕಾರ್ಯಕ್ಕೆ ಜನತೆ ಸಹ ಸೈ ಎನ್ನುತ್ತಿದ್ದಾರೆ.

ABOUT THE AUTHOR

...view details