ಕರ್ನಾಟಕ

karnataka

ETV Bharat / bharat

ಕೆಲಸಕ್ಕೆ ಮರಳುವ ನೌಕರರಿಗೆ 'ಮಾನವ ಕೇಂದ್ರಿತ' ವಿಧಾನ ಸೂಚಿಸಿದ ಐಎಲ್ಒ..!

ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಸುದೀರ್ಘ ಲಾಕ್ ಡೌನ್ ಬಳಿಕ ಕೆಲಸಕ್ಕೆ ಹಿಂದಿರುಗುತ್ತಿರುವ ಕೆಲಸಗಾರರಿಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಹೊಸ ನಿಯಮಾವಳಿಗಳನ್ನ ಹೊರಡಿಸಿದ್ದು, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 'ಮಾನವ ಕೇಂದ್ರಿತ' ವಿಧಾನವನ್ನು ಅನುಸರಿಸಲು ಸೂಚಿಸಿದೆ.

ಐಎಲ್ಒ
ILO suggests 'human-centric'

By

Published : May 26, 2020, 6:20 PM IST

ಹೈದರಾಬಾದ್:ಕೊರೊನಾ ವೈರಸ್ ಮಹಾಮಾರಿ ಹಾವಳಿಯಿಂದ ಲಾಕ್​​​​​ಡೌನ್ ಹಿನ್ನೆಲೆಯಲ್ಲಿ ಸರಿ ಸುಮಾರು ಎರಡಮೂರು ತಿಂಗಳ ಬಳಿಕ ಉದ್ಯೋಗಕ್ಕೆ ಮರಳುತ್ತಿರುವ ಕೆಲಸಗಾರರಿಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಅಥವಾ ನಂತರದ ಸಮಯದಲ್ಲಿ ಉದ್ಯೋಗಕ್ಕೆ ಮರಳುವ ಉದ್ಯೋಗಿಗಳಿಗೆ 'ಮಾನವ ಕೇಂದ್ರಿತ' ವಿಧಾನವನ್ನು ಜಾರಿಗೆ ತರಲು ಸೂಚಿಸಿದೆ.

ಕುಸಿದಿರುವ ಆರ್ಥಿಕ ಪರಿಸ್ಥಿತಿಯನ್ನ ಪುನಃ ಸಕ್ರಿಯಗೊಳಿಸುವುದಕ್ಕಾಗಿ, ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಅತ್ಯಂತ ಸುರಕ್ಷಿತವಾಗಿರಬೇಕು ಮತ್ತು ಹೊಸ ಕೊರೊನಾ ವೈರಸ್‌ಗೆ ನೇರವಾಗಿ ಸಂಬಂಧಿಸಿದ ಅನಗತ್ಯ ಅಪಾಯಗಳಿಗೆ ಅವರು ಒಡ್ಡಿಕೊಳ್ಳುವುದಿಲ್ಲ ಎಂದು ಉದ್ಯೋಗಿಗಳಿಗೆ ಸೂಕ್ತ ಭರವಸೆ ನೀಡಬೇಕಾಗಿದೆ." ಕೆಲಸಕ್ಕೆ ಮರಳುವ ಮೊದಲು, ಕಾರ್ಮಿಕರು ಅನಗತ್ಯ ಅಪಾಯಗಳಿಗೆ ಒಡ್ಡಿಕೊಳ್ಳುವುದಿಲ್ಲ ಎಂಬ ವಿಶ್ವಾಸ ಹೊಂದಿರಬೇಕು. ಉದ್ಯಮಗಳು ಮತ್ತು ಆರ್ಥಿಕತೆಗಳು ಸಾಧ್ಯವಾದಷ್ಟು ಬೇಗ ಅಭಿವೃದ್ಧಿಪಥದತ್ತ ಸಾಗಲು ಸಹಾಯ ಮಾಡಲು, ಕಾರ್ಮಿಕರು ಈ ಹೊಸ ನಿಯಮಾವಳಿಗಳೊಂದಿಗೆ ಸಹಕರಿಸಬೇಕಾದ ಅಗತ್ಯವಿದೆ ಎಂದು ಐಎಲ್ಒನ ನೀತಿ ನಿರ್ದೇಶಕ ಜನರಲ್ ಡೆಬೊರಾ ಗ್ರೀನ್ಫೀಲ್ಡ್ ಹೇಳುತ್ತಾರೆ.

"ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಮಿಕನನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಇದು ಸೂಚಿಸುತ್ತದೆ. ಇದರಲ್ಲಿ ವಯಸ್ಸಾದ ಕಾರ್ಮಿಕರು, ಗರ್ಭಿಣಿ ಕಾರ್ಮಿಕರು, ಮೊದಲೇ ಅನಾರೋಗ್ಯಕ್ಕೆ ಒಳಗಾಗಿರುವ ವೈದ್ಯಕೀಯ ಪರಿಸ್ಥಿತಿ ಇರುವವರು, ನಿರಾಶ್ರಿತರು, ವಲಸಿಗರು ಮತ್ತು ಅನೌಪಚಾರಿಕ ವಲಯದಲ್ಲಿರುವವರು ಸೇರಿದ್ದಾರೆ." ಕೆಲಸಕ್ಕೆ ಮರಳುವಾಗ ಲಿಂಗ, ಆರೋಗ್ಯ ಸ್ಥಿತಿ ಅಥವಾ ಇತರ ಅಂಶಗಳಿಗೆ ಸಂಬಂಧಿಸಿದಂತೆ ಕಂಪನಿಗಳ ನೀತಿ ನಿಯಮಾವಳಿ ತಾರತಮ್ಯವನ್ನು ಸೃಷ್ಟಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ಗಮನ ಹರಿಸಬೇಕಾಗುತ್ತದೆ.

" ಮಾರಕ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರೂಪಿಸಲಾಗಿರುವ ಹೊಸ ಮಾರ್ಗಸೂಚಿಗಳನ್ನು ನೌಕರರು ಓದಿ ಅರ್ಥ ಮಾಡಿಕೊಂಡು ದೇಶದ ಆರ್ಥಿಕತೆಯನ್ನು ಸಮತೋಲಿತ ರೀತಿಯಲ್ಲಿ ಚೇತರಿಸಿಕೊಳ್ಳಲು ಸಹಕರಿಸಬೇಕಾಗುತ್ತದೆ, ಐಎಲ್ಒನ ಉಪ ಮಹಾನಿರ್ದೇಶಕರು ತಿಳಿಸಿದ್ದಾರೆ.

ಹೀಗಾಗಿ, ಈ ಬಗ್ಗೆ ಸಾಮಾಜಿಕ ಚರ್ಚೆ ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ, ಇದು ಅತ್ಯಂತ ಪರಿಣಾಮಕಾರಿಯಾಗಿ ಮಾಹಿತಿ ಹರಡುವ ಮತ್ತು ನೀತಿ ನಿಯಮಾವಳಿಗಳನ್ನ ಕಾರ್ಯಗತಗೊಳಿಸುವ ಮಾರ್ಗವಾಗಿದೆ. "ಇದು ಕಂಪನಿಗಳಿಗೆ ವರ್ಕ್ ಫ್ರಮ್ ಹೋಂ ಪಾಲಿಸಿಗೆ ಹೆಚ್ಚು ಒಟ್ಟು ನೀಡುವಂತೆ ಉತ್ತೇಜಿಸುತ್ತದೆ. ಇದರ ಜೊತೆಗೆ ಭೌತಿಕ ಸಭೆಯ ಬದಲು ವರ್ಚುವಲ್ ಸಭೆಗಳನ್ನು ಉತ್ತೇಜಿಸಲು ಇದು ಕಂಪನಿಗಳನ್ನು ಉತ್ತೇಜಿಸುತ್ತದೆ. ಏಕೆಂದರೆ ಬೌತಿಕ ಸಭೆಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ವರ್ಚುವಲ್ ಸಭೆಗಳು ಉತ್ತಮ ಎಂದು ಹೇಳುತ್ತದೆ." ಪ್ರತಿಯೊಂದು ಕೆಲಸದ ಸ್ಥಳಕ್ಕೆ ತಕ್ಕಂತೆ ನಿರ್ದಿಷ್ಟವಾದ ನೀತಿ ನಿಯಮಾವಳಿಗಳಿವೆ. ಬೌತಿಕವಾಗಿ ವ್ಯಕ್ತಿ ವ್ಯಕ್ತಿಗಳ ನಡುವೆ ಪ್ಲಾಸ್ಟಿಕ್ ತಡೆಗೋಡೆ ನಿರ್ಮಿಸುವುದು, ಸೂಕ್ತ ಗಾಳಿ ವ್ಯವಸ್ಥೆ ಅಥವಾ ಶಿಫ್ಟ್ ರೀತಿ ಕೆಲಸದ ಅವಧಿಯನ್ನ ಇಡುವುದರಿಂದ ಕೆಲಸದ ಸ್ಥಳವನ್ನ ಸ್ವಚ್ಛ ಮತ್ತು ಸೋಂಕುರಹಿತವಾಗಿಡಲು ನೆರವಾಗುತ್ತದೆ. ಇವೆ ಮುಂತಾದ ನಿಯಮಾವಳಿ ಇದರಲ್ಲಿರುವ ಸಾಧ್ಯತೆ ಇದೆ.

ಕೆಲಸದ ಸ್ಥಳದಲ್ಲಿ ಕೋರೋಣ ವೈರಸ್ ಸೋಂಕಿನ ಅಪಾಯ ತಪ್ಪಿಸಿಕೊಳ್ಳಲು ಈ ಮಾರ್ಗಸೂಚಿ 5 ಹಂತಗಳಲ್ಲಿ ವಿಧಾನವನ್ನ ಉದ್ಯೋಗಿಗಳಿಗೆ ಸೂಚಿಸುತ್ತದೆ.

(ಎ) ಅಪಾಯಗಳನ್ನು ಗುರುತಿಸಿ

(ಬಿ) ಯಾರಿಗೆ ಹಾನಿಯಾಗಬಹುದು ಮತ್ತು ಹೇಗೆ ಎಂದು ಗುರುತಿಸಿ

(ಸಿ) ಅಪಾಯವನ್ನು ಮೌಲ್ಯಮಾಪನ ಮಾಡಿ. ಗುರುತಿಸಿ ಮತ್ತು ಸುರಕ್ಷತೆ ಹಾಗು ಆರೋಗ್ಯಕ್ಕೆ ಹಾನಿಯಾಗುವುದನ್ನ ನಿಯಂತ್ರಿಸುವ ವಿಧಾನಗಳ ಮೂಲಕ ನಿರ್ಧಾರ ಕೈಗೊಳ್ಳಿ.

(ಡಿ) ಯಾವ ಅಪಾಯ ನಿಯಂತ್ರಣ ಕ್ರಮಗಳು ಮತ್ತು ಸಮಯದ ಚೌಕಟ್ಟನ್ನು ಕಾರ್ಯಗತಗೊಳಿಸಲು ಯಾರು ಜವಾಬ್ದಾರರು ಎಂಬುದನ್ನು ದಾಖಲು ಮಾಡಿ

(ಇ) ಈ ಬಗ್ಗೆ ನೀವು ಕಂಡುಕೊಂಡದ್ದನ್ನ ದಾಖಲು ಮಾಡಿ, ಅಪಾಯದ ಮೌಲ್ಯಮಾಪನವನ್ನು ಮೇಲ್ವಿಚಾರಣೆ ಮಾಡಿ, ಪರಿಶೀಲಿಸಿ ಮತ್ತು ಅಗತ್ಯವಿದ್ದಾಗ ನವೀಕರಿಸಿ.

ABOUT THE AUTHOR

...view details