ಮೀರತ್: ಉತ್ತರ ಪ್ರದೇಶದ ವಿಶೇಷ ಟಾಸ್ಕ್ ಪೋರ್ಸ್ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಮೀರತ್ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ.
ಅನಧಿಕೃತವಾಗಿ NCERT ಬುಕ್ಸ್ ಮುದ್ರಣ... ದಾಳಿಯಲ್ಲಿ 35 ಕೋಟಿ ಮೌಲ್ಯದ ಬುಕ್ಸ್ ವಶಕ್ಕೆ - ಎನ್ಸಿಇಆರ್ಟಿ ಪುಸ್ತಕ ಮುದ್ರಣ
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, 35 ಕೋಟಿ ಮೌಲ್ಯದ ಎನ್ಸಿಇಆರ್ಟಿ ಬುಕ್ಸ್ ವಶಕ್ಕೆ ಪಡೆದಿದ್ದಾರೆ.
ಅನಧಿಕೃತವಾಗಿ ಎನ್ಸಿಇಆರ್ಟಿ ಪುಸ್ತಕಗಳನ್ನು ಮುದ್ರಿಸುತ್ತಿದ್ದ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ 35 ಕೋಟಿ ಮೌಲ್ಯದ ಪುಸ್ತಕಗಳನ್ನು ಹಾಗೂ 6 ಪ್ರಿಂಟಿಂಗ್ ಮಶೀನ್ಗಳು ಸೇರಿ 12 ಜನರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಎಸ್ಎಸ್ಪಿ ಅಜಯ್ ಪ್ರತಿಕ್ರಿಯೆ ನೀಡಿದ್ದು, ಪ್ರಿಂಟಿಂಗ್ ಮಶೀನ್ ಹಾಗೂ 35 ಕೋಟಿ ಮೌಲ್ಯದ ಪುಸ್ತಕಗಳನ್ನು ಜಪ್ತಿ ಮಾಡಿಕೊಂಡು, 12 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾಗಿ ತಿಳಿಸಿದ್ದಾರೆ.