ನವದೆಹಲಿ:ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸ ಗೌಡ ಇದೀಗ ಎಲ್ಲರ ಗಮನ ಸೆಳೆದಿದ್ದು, ಜಮೈಕಾದ ಮಿಂಚಿನ ಓಟಗಾರನೊಂದಿಗೆ ಮಾತುಕತೆ ನಡೆಸಲು ಇದೀಗ ಕೇಂದ್ರ ಸಚಿವರು ಮುಂದಾಗಿದ್ದಾರೆ.
ಕಂಬಳ ಕ್ರೀಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಶ್ರೀನಿವಾಸ ಗೌಡ ಅವರು ಮಾಡಿದ ಸಾಧನೆ ಎಲ್ಲರ ನಿಬ್ಬೆರಗಾಗಿಸಿದೆ. ಇವರು 100 ಮೀಟರ್ ಓಟವನ್ನು 9.58 ಸೆಕೆಂಡ್ನಲ್ಲಿ ಮುಗಿಸಿ ದಾಖಲೆ ನಿರ್ಮಿಸಿದ ಉಸೇನ್ ಬೋಲ್ಟ್ ಸಾಧನೆ ಯಾರೂ ಮೀರಿಸಿಲ್ಲ. ಈ ಸಾಧನೆಯನ್ನು ಮೀರಿಸಿ ಕಂಬಳದ ಗದ್ದೆಯಲ್ಲಿ ಕೋಣಗಳೊಂದಿಗೆ ಓಡಿ ಶ್ರೀನಿವಾಸ ಗೌಡ ದಾಖಲೆ ನಿರ್ಮಿಸಿದ್ದಾರೆ. 142.5 ಮೀಟರ್ ಅನ್ನು 13.62 ಸೆಕೆಂಡ್ ನಲ್ಲಿ ಕ್ರಮಿಸಿದ್ದಾರೆ. ಈ ಲೆಕ್ಕಾಚಾರವನ್ನ100 ಮೀಟರ್ಗೆ ಇಳಿಸಿದರೆ ಉಸೇನ್ ಬೋಲ್ಟ್ ಗಿಂತಲೂ 3 ಸೆಕೆಂಡ್ ವೇಗವಾಗಿ ಅವರು ಕ್ರಮಿಸಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ.
ಇವರ ಕುರಿತಾದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಇದೀಗ ಶ್ರೀನಿವಾಸ ಗೌಡ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ತರಬೇತುದಾರರು ಶ್ರೀನಿವಾಸ್ ಗೌಡ ಅವರ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಒಲಿಂಪಿಕ್ಸ್ನಲ್ಲಿನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್ನಲ್ಲಿ ಭಾರತದ ಯಾವುದೇ ಪ್ರತಿಭೆ ಮೂಲೆಗುಂಪು ಆಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಇನ್ನು ಶ್ರೀನಿವಾಸಗೌಡ ಅವರು ತಮ್ಮ ಸಾಧನೆ ಬಗ್ಗೆ ಮಾತನಾಡಿದ್ದು, ಜನ ನನ್ನನ್ನು ಉಸೇನ್ ಬೋಲ್ಟ್ ಜತೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ, ಅವರೊಬ್ಬ ವಲ್ಡ್ ಚಾಂಪಿಯನ್ ಆಟಗಾರ. ನಾನು8 ಕೇವಲ ಬತ್ತದ ಗದ್ದೆಯಲ್ಲಿ ಓಡುವವನಾಗಿದ್ದೇನೆ ಎಂದು ಮುಗ್ದತೆಯಿಂದ ಹೇಳಿಕೊಂಡಿದ್ದಾರೆ.
ಇನ್ನೊಂದು ಕಡೆ, ಶ್ರೀನಿವಾಸಗೌಡ ಈಗ ಸಾಮಾಜಿಕ ಜಾಲತಾಣದ ಹೀರೋ ಆಗಿದ್ದು, ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ ಮಹಿಂದ್ರಾ ಸಹ ಈ ಬಗ್ಗೆ ಟ್ವೀಟ್ ಮಾಡಿ ಗುಣಗಾನ ಮಾಡಿದ್ದಾರೆ. ಜಸ್ಟ್ ಈ ವ್ಯಕ್ತಿಯ ದೇಹದ ಓಗವನ್ನ ನೋಡಿ.. ಇವರು ಚಾಕಚಕ್ಯತೆಯ ಅಥ್ಲೀಟ್ ಗುಣಗಳು ಈತನ ಪಾದಗಳಲ್ಲಿ ಕಾಣುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ಅವರ ಟ್ವೀಟ್ ಅನ್ನು ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಮ್ಯಾಪ್ ಸಹ ಮಾಡಿದ್ದರು.