ನವದೆಹಲಿ: ಅಪರಾಧಿಗಳನ್ನು ಗಲ್ಲಿಗೇರಿಸಲು ವಿಳಂಬಗೊಳಿಸುವ ಅವರ ತಂತ್ರವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ . ಫೆಬ್ರವರಿ 1 ರಂದು ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕವೇ ತೃಪ್ತಳಾಗುತ್ತೇನೆ ಎಂದು 2012 ರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮೃತ ಸಂತ್ರಸ್ತೆ ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ.
ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕವೇ ತೃಪ್ತಿ: ನಿರ್ಭಯಾ ತಾಯಿ ನೇರ ನುಡಿ! - ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ
ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ 'ವಿಶೇಷ ಅರ್ಜಿ'ಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಆಶಾ ದೇವಿ, ಫೆಬ್ರವರಿ 1 ರಂದು ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕವೇ ತೃಪ್ತಳಾಗುತ್ತೇನೆ ಎಂದು ತಿಳಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ 2012 ರಲ್ಲಿ ಘಟನೆ ನಡೆದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ 'ಸ್ಪೆಷಲ್ ಲೀವ್ ಪಿಟಿಷನ್' ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಆಶಾ ದೇವಿ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇವರು ಒಂದೊಂದೇ ನೆಪವೊಡ್ಡಿ, ಗಲ್ಲು ಶಿಕ್ಷೆಯನ್ನ ಹೇಗೆ ವಿಳಂಬ ಮಾಡಿದರೋ ಹಾಗೆಯೇ ಒಬ್ಬರಾದ ಮೇಲೆ ಒಬ್ಬ ಅಪರಾಧಿಯನ್ನು ಗಲ್ಲಿಗೆರಿಸಬೇಕು. ಆಗ ಅವರಿಗೆ ಕಾನೂನಿನ ಜೊತೆಗೆ ಆಟವಾಡುವುದು ಎಂದರೆ ಏನು ಅಂತಾ ಅರ್ಥವಾಗುತ್ತೆ ಎಂದು ತಿಳಿಸಿದ್ದಾರೆ.