ಕರ್ನಾಟಕ

karnataka

ETV Bharat / bharat

ಐಐಟಿ ಟಾಪರ್ ಫಾತಿಮಾ ಲತೀಫ್ ಸಾವಿನ ಪ್ರಕರಣ ಸಿಬಿಐಗೆ ಹಸ್ತಾಂತರ! - IIT Toper Fathima Latheef Suicide Case,

ಐಐಟಿ ಮದ್ರಾಸ್​​​ನಲ್ಲಿ ನೇಣಿಗೆ ಶರಣಾಗಿರುವ ಟಾಪರ್​​ ಫಾತಿಮಾ ಲತೀಫ್​ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.

IIT Toper Fathima Latheef Suicide, IIT Toper Fathima Latheef Suicide Case, Fathima Latheef Suicide Case handle by CBI, IIT Toper Fathima Latheef Suicide Case news, ಐಐಟಿ ಟಾಪರ್ ಫಾತಿಮಾ ಲತೀಫ್ ಆತ್ಮಹತ್ಯೆ, ಐಐಟಿ ಟಾಪರ್ ಫಾತಿಮಾ ಲತೀಫ್ ಆತ್ಮಹತ್ಯೆ ಪ್ರಕರಣ, ಸಿಬಿಐಗೆ ಫಾತಿಮಾ ಲತೀಫ್ ಆತ್ಮಹತ್ಯೆ ಪ್ರಕರಣ, ಐಐಟಿ ಟಾಪರ್ ಫಾತಿಮಾ ಲತೀಫ್ ಆತ್ಮಹತ್ಯೆ ಸುದ್ದಿ,
ಐಐಟಿ ಟಾಪರ್ ಫಾತಿಮಾ ಲತೀಫ್

By

Published : Dec 30, 2019, 4:24 PM IST

ಚೆನ್ನೈ:ಕಳೆದ ಮೂರು ದಿನಗಳ ಹಿಂದೆ ಐಐಟಿ ಮದ್ರಾಸ್​ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಾವು ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್​ ಪಡೆದುಕೊಂಡಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ಲೈಂಗಿಕ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಐಐಟಿ ಮದ್ರಾಸ್​ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಫಾತಿಮಾ ಲತೀಫ್ ನವೆಂಬರ್​ 9ರಂದು ನೇಣಿಗೆ ಶರಣಾಗಿದ್ದಳು. ಆಕೆಯ ಸಾವಿಗೆ ಒಂದು ವಿಷಯದಲ್ಲಿ ಕಡಿಮೆ ಅಂಕ ಪಡೆದುಕೊಂಡಿದ್ದೇ ಕಾರಣ ಎಂದು ತಿಳಿದು ಬಂದಿತ್ತು. ಆದರೆ ಮಾಹಿತಿ ಪ್ರಕಾರ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೂ ಕೇಳಿ ಬಂದಿತ್ತು, ಅದಕ್ಕೆ ಪುಷ್ಠಿ ನೀಡುವಂತಹ ಮಹತ್ವದ ದಾಖಲೆ ಆಕೆಯ ಮೊಬೈಲ್​​ನಲ್ಲಿ ಲಭ್ಯವಾಗಿದೆ. ಆಕೆ ಮೊಬೈಲ್​​ನಲ್ಲಿ ಟೈಪ್​ ಮಾಡಿರುವ ಮಾಹಿತಿಯೊಂದು ಸಿಕ್ಕಿದ್ದು, ಸದ್ಯ ಆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಭೇಟಿ ಮಾಡಿದ್ದ ಪೋಷಕರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ಒದಗಿಸುವಂತೆ ಒತ್ತಾಯ ಮಾಡಿದ್ದರು. ಮೊದಲು ಈ ಪ್ರಕರಣವನ್ನು ತಮಿಳುನಾಡಿನ ಕೊಟ್ಟೂರ್​ಪುರಂ ಪೊಲೀಸರು ತನಿಖೆ ಕೈಗೊಂಡಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈಗ ಪ್ರಕರಣವನ್ನು ಸಿಬಿಐಗೆ ನೀಡಿದ್ದು, ಸಿಬಿಐ ಅಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ಫಾತಿಮಾ ಲತೀಫ್‌ ಕೇರಳದ ಕೊಲ್ಲಂ ಮೂಲದವಳಾಗಿದ್ದು, ನವೆಂಬರ್​ ಬೆಳಗ್ಗೆ ಐಐಟಿ ಮದ್ರಾಸ್‌ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಮೊದಲು ಆಕೆಯ ಸಾವು ಅಸ್ವಾಭಾವಿಕ ಎಂದು ಪೊಲೀಸರು ಪ್ರಕರಣ​ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.

ABOUT THE AUTHOR

...view details